ರಾಮನಗರ: ಜೂ- 25 ರಿಂದ ಆರಂಭವಾಗುವಂತಹ SSLC ಪರೀಕ್ಷೆಯನ್ನು ಬರೆಯುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಬಾಟಲ್ ಸ್ಯಾನಿಟೈಸರ್ ಉಚಿತವಾಗಿ ನೀಡುವ ಕಾರ್ಯಕ್ಕೆ ತಾಲ್ಲೂಕು ಪಂಚಾಯ್ತಿ ಮಾಜಿ ಆಧ್ಯಕ್ಷ ಗಾಣಕಲ್ ನಟರಾಜು ಮುಂದಾಗಿದ್ದಾರೆ.
ತಾಲ್ಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಶನಿವಾರ ಸ್ಯಾನಿಟೈಸರ್ ಹಸ್ತಾಂತರಿಸಿ ಮಾತನಾಡಿದ ಅವರು ಬಿಡದಿ ಹೋಬಳಿ ವ್ಯಾಪ್ತಿಯ ಬಿಡದಿ ಹೋಬಳಿಯ ಗಾಣಕಲ್ ಪ್ರೌಢಶಾಲೆ , ಚೊಕ್ಕಲಿಂಗ ವಿದ್ಯಾಲಯ, ಸರ್ಕಾರಿ ಪ್ರೌಢಶಾಲೆ ಶೇಷಗಿರಿಹಳ್ಳಿ , ಸರ್ಕಾರಿ ಪ್ರೌಢಶಾಲೆ ಕೊಡಿಯಾಲ ಕರೆನಹಳ್ಳಿ, ಸರ್ಕಾರಿ ಪ್ರೌಢಶಾಲೆ ಅರಳಾಳುಸಂದ್ರ, ವೃಷಭಾವತಿ ಪ್ರೌಢಶಾಲೆ ಬೈರಮಂಗಲ, ಸರ್ಕಾರಿ ಪ್ರೌಢಶಾಲೆ ತೊರೆ ದೊಡ್ಡಿ, ಭಾಗ್ಯ ಬೈರವೇಶ್ವರ ಪ್ರೌಢಶಾಲೆ ಬಿಡದಿ, ಸರ್ಕಾರಿ ಪ್ರೌಢಶಾಲೆಗಳಿಗೆ ಸ್ವಂತ ಹಣದಿಂದ ಸ್ಯಾನಿಟೈಸರ್ ವಿತರಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಯಾವುದೇ ರೀತಿ ಕೊರೋನಾ ಬಗ್ಗೆ ಆತಂಕ ಪಡೆದೆ ಸ್ವಲ್ಪ ಎಚ್ಚರಿಕೆಯಿಂದ ಪರೀಕ್ಷೆಯನ್ನು ಬರೆಯಬೇಕು. ಯಾವುದೇ ರೀತಿಯಲ್ಲೂ ಧೃತಿಗೆಡಬಾರದು ಎಂಬ ಮನವಿಯನ್ನು ಮಾಡುತ್ತಾ ಕಡ್ಡಾಯವಾಗಿ ಮಾಸ್ಕನ್ನು ಬಳಕೆ ಮಾಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆಗೆ ತಾವು ಓದಿರುವಂತದ್ದನ್ನು ಯಾವುದೇ ಆತಂಕ ಪಡೆದೆ ಬರೆಯಬೇಕೆಂದು ತಮ್ಮಲ್ಲಿ ಧೈರ್ಯವನ್ನು ತುಂಬುವ ನಿಟ್ಟಿನಲ್ಲಿ ಇವತ್ತು ಸ್ಯಾನಿಟೈಸರ್ ಬಾಟಲ್ ಗಳನ್ನು ನೀಡಿದ್ದೇನೆ ಎಂದು ಹೇಳಿದರು.
ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆಯನ್ನು ಧೈರ್ಯವಾಗಿ ಬರೆಯಬೇಕು ಯಾವುದೇ ರೀತಿಯ ಆತಂಕ ಪಡಬಾರದು ನಿಮ್ಮ ಜೀವನ ಸುಖಮಯವಾಗಿರಲಿ ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ ಎಂದು ಈ ಮೂಲಕ ಶುಭಾಶಯಗಳನ್ನು ಕೋರುತ್ತೇನೆ ಎಂದರು.
ಈ ಸಂದರ್ಭದಲ್ಲಿ ತೊರೆದೊಡ್ಡಿ ಸರ್ಕಾರಿ ಶಾಲೆಯ ಸಿಬ್ಬಂದಿ ಹಾಜರಿದ್ದರು.