Breaking News

ಮಂಡ್ಯ ಜಿಲ್ಲೆ ನಾಗಮಂಗಲ ಶಾಸಕ ಸುರೇಶಗೌಡ ರಿಂದ ಬಡ ಕುಟುಂಬಕ್ಕೆ ಫುಡ್ ಕಿಟ್ ಮತ್ತು ಮಾಸ್ಕ್ ವಿತರಣೆ.

Spread the love

ಮಂಡ್ಯ ಜಿಲ್ಲೆ ನಾಗಮಂಗಲ ಶಾಸಕ ಸುರೇಶಗೌಡ ರಿಂದ ಬಡ ಕುಟುಂಬಕ್ಕೆ ಫುಡ್ ಕಿಟ್ ಮತ್ತು ಮಾಸ್ಕ್ ವಿತರಣೆ.

ವಿಶ್ವವನ್ನೆ ಬೆಚ್ಚಿ ಬೀಳಿಸಿರುವ ಕರೋನಾ ವೈರಸ್ ಮಹಾಮಾರಿಯಿಂದ ಅದಷ್ಟೋ ಜನಗಳ ಬದುಕು ದುಸ್ಥಿತಿ ತಲುಪಿರುವುದು ಬಹಿರಂಗ ಸತ್ಯ. ಈ ನಿಟ್ಟಿನಲ್ಲಿ ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಕಡುಬಡತನ ಎದುರಿಸುತ್ತಿರುವ ಮೂರು ಸಾವಿರ ಕುಟುಂಬಗಳಿಗೆ ತಾಲ್ಲೂಕು ಟಾಸ್ಕ್ ಪೋರ್ಸ್ ಸಮಿತಿ ಮೂಲಕ ಶಾಸಕ ಸುರೇಶ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡರು, ಉಚಿತ ಫುಡ್ ಕಿಟ್ ಗಳನ್ನು ವಿತರಿಸಿದರು.

ಇದೇ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುರೇಶ್ ಗೌಡ್ರು, ಇಲ್ಲಿಯ ವರೆಗೆ ಎದುರಿಸುತ್ತಿರುವ ಕರೋನಾ ಪರಿಣಾಮ ಸಾಂಕೇತಿಕವಷ್ಟೆ. ನಿಜವಾದ ಪರಿಣಾಮದ ಪ್ರಾರಂಭ ಇನ್ನು ಮುಂದೆ. ಸಾಮಾಜಿಕ ಅಂತರವೊಂದು ಬಿಟ್ಟು ಮತ್ಯಾವುದೇ ಅವಕಾಶವಿಲ್ಲದ ಕಾರಣ, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಕಾಯ್ದೆಯಾಗುವ ಮುನ್ನ ಕಡ್ಡಾಯವಾಗಿ ಕರ್ತವ್ಯವಾಗಿಯೇ ಪಾಲಿಸಬೇಕು. ಕಡು ಬಡವರಿಗೆ ನಿಜವಾದ ಸಹಾಯ ಇನ್ನುಮುಂದೆ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಇಂದು ಕೇವಲ ಮೂರು ಸಾವಿರ ದಿನಸಿ ಕಿಟ್ ವಿತರಣೆಯಾಗುತ್ತಿದೆ ಎಂದರು

ಎಂ ಎಲ್.ಸಿ ಅಪ್ಪಾಜಿಗೌಡ್ರು ಮಾತನಾಡಿ, ಕರೋನಾ ನಿಯಂತ್ರಣಕ್ಕಾಗಿ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ತುರ್ತು ಸೇವಾ ಕರೋನಾ ಸೈನಿಕರ ಆರೋಗ್ಯಕ್ಕೆ ಅಗತ್ಯ ಪರಿಕರಗಳಾದ ಗುಣಮಟ್ಟದ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ವಿತರಣೆ ಮಾಡಲಾಗಿದೆ. ಸಮಾಜದ ಹಿತಕಾಯುವವರ ಹಿತ ಕಾಯುವ ಕೆಲಸ ಜನಪ್ರತಿನಿಧಿಗಳಿಂದ ಆಗಬೇಕಿದೆ. ಸಾರ್ವಜನಿಕರಲ್ಲಿ ಸ್ವಯಂ ಜಾಗೃತಿಯ ಹೊರತು ಕರೋನಾ ನಿಯಂತ್ರಣ ಕಷ್ಟಸಾಧ್ಯ. ಪ್ರತಿಯೊಬ್ಬರೂ ಸ್ವಯಂ ಗೃಹಬಂಧನಕ್ಕೆ ಒಳಗಾಗಬೇಕು ಎಂದರು.
ಮೂರು ಸಾವಿರ ದಿನಸಿ ಕಿಟ್ಸ್ ಮತ್ತು 6 ಸಾವಿರ ಮಾಸ್ಕ್ಸ್ ಗಳನ್ನು ತಹಸೀಲ್ದಾರ್ ಮತ್ತು ಟಿಹೆಚ್ ಒ ಮೂಲಕ ತಾಲ್ಲೂಕು ಟಾಸ್ಕ್ ಫೋರ್ಸ್‌ ಸಮಿತಿಗೆ ಹಸ್ತಾಂತರಿಸಿದರು. ಇದೇ ದಿನ ನಾಗಮಂಗಲ ಮತ್ತು ಬೆಳ್ಳೂರು ಪಟ್ಟಣ ವ್ಯಾಪ್ತಿ ಸೇರಿದಂತೆ ಗ್ರಾಮ ಪಂಚಾಯ್ತಿವಾರು ಕಡುಬಡವರಿಗೆ ದಿನಸಿ ವಿತರಿಸಿದರು

ತಾಲ್ಲೂಕು ಪಂಚಾಯತಿ ಅಧ್ಯಕ್ಷ ದಾಸೇಗೌಡ ಪುರಸಭೆ ಸದಸ್ಯರಾದ ಯೋಗೇಶ್.ಚನ್ನಪ್ಪ.ವಿಜಯಕುಮಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಅನಂತರಾಜು.ತಾಲ್ಲೂಕು ಆರೋಗ್ಯ ಅಧಿಕಾರಿ ದನಂಜಯ.ತಾಲ್ಲೂಕು ದಂಡದಿಕಾರಿ.ಕುಂಞ ಅಹಮದ್ ಉಪಸ್ಥತರಿದ್ದರು


Spread the love

About Laxminews 24x7

Check Also

ಪಿ ಲಂಕೇಶ್ ಮೊಮ್ಮಗ, ಚಿತ್ರರಂಗಕ್ಕೆ

Spread the loveSamarjit Lankesh: ಪಿ ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ