ಮೂಡಲಗಿ: ಮಹಾ ಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟಣದ ಸರಕಾರಿ ಆಸ್ಪತ್ರೆಯ ಸೇವಾ ಸಿಬ್ಬಂದಿಗಳಿಗೆ, ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮತ್ತು ಶಿವಾಪೂರ, ಹಳ್ಳೂರ ಗ್ರಾಮದ ಬಡ ಕುಟುಂಬ ಮತ್ತು ಜನತಾ ಪ್ಲಾಟದ ಗುಡಿಸಲು ನಿವಾಸಿಗಳಿಗೆ ಇಲ್ಲಿಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಮತ್ತು ಅದ್ಯಕ್ಷರಾದ ಸವಿತಾ ತುಕ್ಕನ್ನವರ ಅವರು ಮನೆ ಮನೆಗೆ ತೆರಳಿ 4ಕ್ವಿಂಟಲ್ ದ್ರಾಕ್ಷಿ ಹಣ್ಣು ಉಚಿತವಾಗಿ ವಿತರಿಸಿ ಮಾನವೀಯತೆ ಮೆರೆದರು.
ಇದಷ್ಟೇ ಅಲ್ಲದೆ ಚಿಕ್ಕ ಧ್ವನಿವರ್ಧಕ ಬಳಿಸಿ ಸರಕಾರದ ಆದೇಶ ಉಲ್ಲಂಘಣೆ ಮಾಡದೆ ಪ್ರತಿಯೊಬ್ಬರೂ ಮನೆಯಲ್ಲೇ ಇರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ,ಮಾಸ್ಕ ಧರಿಸಿ, ನಮ್ಮನ್ನು ನಾವು ಹಾಗೂ ನಮ್ಮವರನ್ನು ರಕ್ಷಿಸಿಕೊಳ್ಳುವುದು ಅತಿ ಅವಶ್ಯವಾಗಿದೆ. ದೇಶದ ಹಿತ ಕಾಪಾಡುವುದರೊಂದಿಗೆ ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಪಣ ತೊಡಿ ಎಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪಿ.ಎಸ್.ಐ.ಮಲ್ಲಿಕಾರ್ಜುನ ಸಿಂಧೂರ,ಯಲ್ಲಾಲಿಂಗ ವಾಳದ,ಗಣ್ಯರಾದ ಶಿವನಗೌಡ ಪಾಟೀಲ,ಪರಪ್ಪಾ ಪಾಟೀಲ,ಕೆಂಪಣ್ಣ ಮುಧೋಳ,ಸತ್ಯಪ್ಪ ಜುಂಜರವಾಡ,ತಾ.ಪಂ.ಸದಸ್ಯ ಶಿವಬಸು ಜುಂಜರವಾಡ,ಸತೀಶ ಪಾಟೀಲ,ಶಂಕರ ಮಾರಾಪೂರ,ಮಹಾಂತೇಶ ಕುಡಚಿ,ಸಿದ್ದಪ್ಪ ನಡಗಡ್ಡಿ,ಬಾಗೆವಾಡಿ,ನಾಗಪ್ಪ ಚಿನ್ನಪ್ಪಗೋಳ,ನಾಗಯ್ಯಾ ಮಠಪತಿ,ಪುಂಡಲೀಕ ನಡಕಟ್ಟಿ,ರೇವಪ್ಪ ಬಿಳ್ಳೂರ, ಗ್ರಾ.ಪಂ.ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.