ಕೋಲಾರ : ಜನಸಾಮಾನ್ಯರ ಮನವಿಗೆ ತಕ್ಷಣ ಸ್ಪಂದಿಸುವ ಮೂಲಕ ರೈಲ್ವೆ ಇಲಾಖೆ ಸಾಕಷ್ಟು ಹೆಸರು ಮಾಡಿದೆ. ಈ ಬಾರಿ ಕೂಡ ಗೋಪಾಲಕರ ಮನವಿ ಪುರಸ್ಕರಿಸಿದ ರೈಲ್ವೆ ಇಲಾಖೆ ದೆಹಲಿಯಿಂದ ಹಸು ಸಾಗಾಣೆಗಾಗಿ ಆರು ವಿಶೇಷ ಕೋಚ್ ವ್ಯವಸ್ಥೆ ಮಾಡಿದ್ದು, ಮೆಚ್ಚುಗೆ ಪಡೆದಿದೆ. ದುಬಾರಿ ಬೆಲೆಯ ಹೈಬ್ರಿಡ್ ತಳಿಯ ಹಸುಗಳು ಕೋಲಾರ ನಗರದ ನಿವಾಸಿಗಳಾದ ವೆಂಕಟೇಶ್, ಶಬರೀಶ್, ಸುನಿಲ್ ಅವರದ್ದು.ಹಸುವಿನ ವಹಿವಾಟು ನಡೆಸುವ ಇವರು 116 ಹಸುಗಳನ್ನು ಕಳೆದ ಆಗಸ್ಟ್ ತಿಂಗಳಲ್ಲಿ ದೆಹಲಿಯಲ್ಲಿ ಖರೀದಿ ಮಾಡಿದ್ದರು. ಕ್ಯಾಂಟರ್, ಟ್ರಕ್‍ಗಳಲ್ಲಿ ಹಸುಗಳನ್ನ ರವಾನಿಸಿದರೆ, ಜಾನುವಾರುಗಳ ಜೀವಕ್ಕೆ ಹಾನಿಯಾಗುವ ಭೀತಿಯಿಂದ, ರೈಲು ವ್ಯವಸ್ಥೆ ಕಲ್ಪಿಸುವಂತೆ ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರ ಸಹಾಯ ಕೋರಿದ್ದರು, ಹೀಗಾಗಿ ದೆಹಲಿಗೆ ಅನ್ಯ ಕಾರ್ಯದ ನಿಮಿತ್ತ ತೆರಳಿದ್ದ ಸಂಸದರು, ಖುದ್ದು ರೈಲ್ವೆ ಸಚಿವರ ಜೊತೆಗೆ ಮಾತನಾಡಿ, ನಂತರ ದೆಹಲಿಯ ರೈಲ್ವೆ ಭವನಕ್ಕೂ ಭೇಟಿ ನೀಡಿ ಹಸುಗಳನ್ನು ಚಿನ್ನದ ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
Check Also
‘ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯ: ಸತೀಶ ಜಾರಕಿಹೊಳಿ
Spread the loveಬೆಳಗಾವಿ: ”ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯವಾಗುತ್ತದೆ” ಎಂದು …