ಗೋಕಾಕ: ನಗರಸಭೆ ನೆಪದಲ್ಲಿ ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಹಿಂದೆ ಭಾರಿ ಭ್ರಷ್ಟಾಚಾರ ಪಿತೂರಿ ಅಡಗಿದ್ದು, ವ್ಯಾಪಾರಸ್ಥರು ನ್ಯಾಯಬದ್ಧವಾಗಿ ಹೋರಾಟ ನಡೆಸಬೇಕು.ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
ಇಂದು ಗೃಹ ಕಚೇರಿಯಲ್ಲಿ ಮಾತನಾಡಿ ಪುಟಪಾತ್ ಟೆಂಡರ್ ನೆಪ ಹೇಳಿ ಅಂಗಡಿಗಳನ್ನು ತೆರುವುಗೊಳಿಸಲಾಗುತ್ತಿದೆ. ಪುಟ ಪಾತ್ ಗಾಗಿ ಒಟ್ಟು 24 ಕೋಟಿ ರೂ. ಟೆಂಡರ್ ಪಾಸಾಗಿದ್ದು, ಸುಮಾರು ಹತ್ತು ಕೋಟಿ ಕಿಕ್ ಬ್ಯಾಕ್ ಪಡೆಯಲು ಶಾಸಕರ ಅಳಿಯ ಪಿತೂರಿ ನಡೆಸುತ್ತಿದ್ದಾನೆ. ಈಗಾಗಲೇ 16 ಕೋಟಿ ಟೆಂಡರವೊಂದು ಜಾರಿಯಾಗಿದೆ ಎಂದು ಆರೋಪಿಸಿದರು.
ಟೆಂಡರ್ ನಲ್ಲಿ ಭ್ರಷ್ಟಾಚಾರ ನಡೆಸಲು ಜನರನ್ನು ಅಲ್ಲಿಂದ ತೆರವುಗೊಳಿಸಲಾಗುತ್ತಿದೆ. ಮಾಸ್ಟರ್ ಪ್ಲಾನ್ ಕಾಮಗಾರಿ ನಡೆದು ಮೂರು ವರ್ಷವಾದರೂ ಒಂದು ರೊಡ್ ಸಹಿತ ಮಾಡಲಿಲ್ಲ. ಈಗ ಟೆಂಡರ್ ಜಾರಿಯಾಗಿದ್ದರಿಂದ ವ್ಯಾಪಾರಸ್ಥರನ್ನು ತೆರುವುಗೊಳಿಸಲಾಗುತ್ತಿದೆ. ಹಠಾತ್ತನೆ ಪುಟ್ ಪಾತ್ ಮತ್ತು ಟ್ರಾಫಿಕ್ ನೆಪ ಹೇಳಿ ಪೊಲೀಸ್ ಇಲಾಖೆ ಅಧಿಕಾರಿಗಳಿಂದ ತೆರುವುಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ನಗರಸಭೆ ಅಧಿಕಾರಿಗಳು ಇನ್ನಿತರ ಇಲಾಖೆ ಅಧಿಕಾರಿಗಳು ಶಾಸಕರ ಅಳಿಯ ಅಂಬಿರಾವ ಪಾಟೀಲ್ ಮಾತುಗಳನ್ನು ಕೇಳಿ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಟೆಂಡರ್ ರದ್ದುಗೊಳಿಸಿ ಅದನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳಬೇಕು, ಜೂನ್ ನಲ್ಲಿ ಜಾತ್ರೆಯೂ ಇದೆ ನಗರದ ಅಭಿವೃದ್ಧಿಗೆ ಹಣ ಬಳಸಿಕೊಳ್ಳಬೇಕು. ನಗರದ 31 ವಾರ್ಡಗಳಲ್ಲಿ ಸರಿಯಾದ ರಸ್ತೆ ಚರಂಡಿಗಳು ಇಲ್ಲ ಇದಕ್ಕಾಗಿ ಟೆಂಡರ್ ಹಣವನ್ನು ಉಪಯೋಗಿಸಿಕೊಳ್ಳಲಿ ಎಂದು ಸಲಹೆ ನೀಡಿದರು. ಹತ್ತು ಕೋಟಿ ಕಿಕ್ ಬ್ಯಾಕ್ ಪಡೆಯಲು ಶಾಸಕರ ಅಳಿಯ ಪುಟಪಾಟ್ ನಿರ್ಮಿಸುವಂತೆ ಹಠ ಹಿಡಿದಿದ್ದಾನೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ಗೋಕಾಕ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಬೇಕಾದರೆ ವಿಚಾರಿಸಿ ಕೋಡಬೇಕು ಏಕೆಂದರೆ ಇದರಲ್ಲಿ ಭ್ರಷ್ಟಾಚಾರ ನಡೆಸುವ ಯತ್ನ ನಡೆದಿದೆ ಎಂದು ಹೇಳಿದರು.
ಈ ಟೆಂಡರಗಳನ್ನು ರದ್ದುಮಾಡಿ ವ್ಯಾಪಾರಸ್ಟರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಸಾರ್ವಜನಿಅಕ್ರನ್ನು ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.