ಗೋಕಾಕ: ನಿಗದಿತ ಸಮಯದಲ್ಲಿ ಕಿರಾಣಿ ,ದಿನಸಿ ವಸ್ತುಗಳನ್ನು ವಿತರಿಸಿ : ಪ್ರಕಾಶ ಹೋಳೆಪ್ಪಗೋಳ ವಾರ್ನಿಂಗ್
ಲಾಕಡೌನ ಸಂದರ್ಭದಲ್ಲಿ ನಿಗದಿತ ಸಮಯದಲ್ಲಿ ಕಿರಾಣಿ ,ದಿನಸಿ ವಸ್ತುಗಳನ್ನು ವಿತರಿಸಿ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೋಳುವಂತೆ ಅಂಗಡಿಕಾರರು ನಿಗಾ ವಹಿಸಬೇಕು ಎಂದು ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ಹೇಳಿದರು
ಸೋಮವಾರದಂದು ಇಲ್ಲಿನ ಮಿನಿ ವಿಧಾನಸೌಧದಲ್ಲಿ ಕರೆದಿದ್ದ ಕಿರಾಣಿ ಮತ್ತು ಕಾಯಿಪಲ್ಲೆ ವ್ಯಾಪಾರಸ್ಥರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಕೆಳೆದ 21 ದಿನಗಳಿಂದ ನಗರದ ಸಾರ್ವಜನಿಕರಿಗೆ ಯಾವುದೆ ತೊಂದರೆ ಆಗದಂತೆ ದಿನಸಿ ವಸ್ತುಗಳನ್ನು ವಿತರಿಸಲು ಕ್ರಮ ಕೈಗೊಂಡಿರುವದು ಮೆಚ್ಚುವಂತಹದಾಗಿದ್ದು , ಮುಂಬರುವ ಲಾಕಡೌನ ಸಂದರ್ಭದಲ್ಲಿಯೂ ಸಹ ಕಿರಾಣಿ ಮತ್ತು ದಿನಸಿ ವಸ್ತುಗಳನ್ನು ಮಾರಾಟ ಮಾಡುವವರು ಇದನ್ನು ಪಾಲನೆ ಮಾಡಬೇಕು ಮತ್ತು ಅಂಗಡಿಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೋಳ್ಳುವಂತೆ ತಿಳಿ ಹೇಳಿ ಅಂಗಡಿಯ ಹೊರಗಡೆ ಹ್ಯಾಡ್ ಸೈನಿಟೈಜರ್ ಇಟ್ಟು ಗ್ರಾಹಕರು ಸ್ವಚ್ಚತೆಯನ್ನು ಕಾಪಾಡುವಂತೆ ನೋಡಿಕೋಳಬೇಕು. ಈಗಾಗಲೇ ಅಂಗಡಿಕಾರರಿಗೆ ಗ್ರಾಹಕರಿಂದ ಹೆಚ್ಚಿನ ದರ ಪಡೆಯಬಾರದು ಎಂದು ಸೂಚಿಸಿದರು ಸಹ ಹೆಚ್ಚಿಗೆ ದರ ಪಡೆಯು ಬಗ್ಗೆ ದೂರುಗಳು ಬಂದಿವೆ. ಇನ್ನು ಮುಂದೆ ಅಂತಹ ಅಂಗಡಿಗಳನ್ನು ಗುರುತಿಸಿ ಅಂಗಡಿ ಸೀಜ್ ಮಾಡಲು ಕ್ರಮ ಜರುಗಿಸಲಾಗುವದು ಎಂದು ಖಡಕ್ಕಾಗಿ ಎಚ್ಚರಿಸಿದರು. ಅಂಗಡಿಕಾರರು ಯಾವುದೇ ಕಾರಣಕ್ಕೂ ಅಂಗಡಿಗಳ ಮುಂದೆ ಜನಜಂಗುಳಿ ಆಗದಂತೆ ನೋಡಿ ಕೊಳ್ಳಬೇಕು. ಹೋಮ ಡಿಲೆವರಿ ನೆಪದಲ್ಲಿ ವಿನಾಕಾರಣ ಟೀ ಶರ್ಟ್ ಹಾಕಿ ತಿರುಗದಂತೆ ನೋಡಿಕೊಳ್ಳಿ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಹೇಳಿದರು. ಇದೇ ಸಂದರ್ಭದಲ್ಲಿ ನಗರದ ಎಲ್ಲ ಕಿರಾಣಿ ವ್ಯಾಪಾರಸ್ಥರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು
ಸಭೆಯಲ್ಲಿ ಡಿ.ಎಸ್.ಪಿ ಡಿ.ಟಿ ಪ್ರಭು , ಸಿ.ಪಿ.ಐ ಗೋಪಾಲ ರಾಠೋಡ , ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು