ಘಟಪ್ರಭಾ: ಇಷ್ಟು ದಿನ ಸದ್ದಿಲ್ಲದೆ ಶಾಂತವಾಗಿ ನಡೆಯುತ್ತಿದ್ದ ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗ್ರಾಮದ ಜನಜೀವನ ಅಸ್ತವ್ಯಸ್ಥ ವಾಗುವ ಕಾಲ ಸನ್ನಿಹಿತವಾಗಿದೆ. ಏಕೆಂದರೆ ಬಲ್ಲ ಮೂಲಗಳ ಪ್ರಕಾರ ಘಟಪ್ರಭಾದಲ್ಲಿ ಎರಡು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*
ಪ್ರಾಥಮಿಕ ಮಾಹಿತಿ ಪ್ರಕಾರ ಕಳೆದ ಹತ್ತು ದಿನಗಳ ಹಿಂದೆ ಸಂಬಂಧಿಕರ ಬನಹಟ್ಟಿ ಮದುವೆಗೆ ಹೋಗಿದ್ದ ಬಸವ್ ನಗರದ 2 ಜನರಿಗೆ ಇವತ್ತು ಕೋರೋನಾ ದೃಢವಾಗಿದೆ. ಇದರಿಂದಾಗಿ ಇಷ್ಟು ದಿನ ಶಾಂತವಾಗಿದ್ದ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣಕ್ಕೆ ಕೋರೋನಾ ಪ್ರವೇಶ ಪಡೆದಿದ್ದು ಜನರು ಹೆಚ್ಚಿನ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಪಟ್ಟಣಕ್ಕೆ ಮೀರಜ್, ಕೋಲ್ಹಾಪೂರ, ಗೋವಾ ಸೇರಿದಂತೆ ಮಹಾರಾಷ್ಟ್ರದ ಹಲವಾರು ನಗರಗಳ ನಂಟು ಇದ್ದು ಇದನ್ನೆಲ್ಲ ತಡೆಯುವ ಜವಾಬ್ದಾರಿ ತಾಲುಕಾ ಆಡಳಿತ ಹೆಗಲೇರಿದೆ. ಈ ತಕ್ಷಣದಿಂದ ಜಾರಿಗೆ ಬರುವಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಸ್ಥಳೀಯ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.