ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಹಗರಣದ ಜಾಲ ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯನ್ನೂ ಆವರಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಆಂತರಿಕ ಭದ್ರತಾ ದಳ ಹಲವು ಕಿರುತೆರೆ ನಟ ನಟಿಯರಿಗೆ ನೋಟಿಸ್ ನೀಡಿದ್ದು, ಇಂದು ನಟ ಅಭಿಷೇಕ್ ಮತ್ತು ನಟಿ ಗೀತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ.
ಐಎಸ್ ಡಿ ಪೊಲೀಸರು ಇತ್ತೀಚೆಗಷ್ಟೇ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದರು. ಅವರುಗಳು ಹಲವು ಸಿನಿಮಾ ಮತ್ತು ಕಿರುತೆರೆ ನಟರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.
ಲೂಸ್ ಮಾದ ಖ್ಯಾತಿಯ ನಟ ಯೋಗಿಶ್ ಮತ್ತು ಕ್ರಿಕೆಟಿಗ ಅಯ್ಯಪ್ಪ ಅವರನ್ನು ಸೋಮವಾರ ವಿಚಾರಣೆ ನಡೆಸಲಾಗಿತ್ತು. ಇಂದು ಖಾಸಗಿ ವಾಹಿನಿಯ ಧಾರವಾಹಿ ನಟಿಯರಾದ ಅಭಿಷೇಕ್ ಮತ್ತು ಗೀತಾ ಭಟ್ ಅವರನ್ನು ಐಎಸ್ ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
Laxmi News 24×7