ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಗತ್ಯ ಎನಿಸಿದರೆ ನಟಿ ದೀಪಿಕಾ ಪಡುಕೋಣೆ ಅವರಿಗೆ ಸಮನ್ಸ್ ನೀಡಲಾಗುತ್ತದೆ ಎಂದು ಎನ್‌ಸಿಬಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ದೀಪಿಕಾ ಹಾಗೂ ಅವರ ಮ್ಯಾನೇಜರ್ ಕರೀಷ್ಮಾ ನಡುವಿನ ವಾಟ್ಸ್‌ಆಯಪ್ ಸಂಭಾಷಣೆಗೆ ಸಂಬಂಧಿಸಿ ಸಮನ್ಸ್ ನೀಡಲು ನಿರ್ಧರಿಸಲಾಗಿದೆ ಎನ್‌ಸಿಬಿ ಮೂಲಗಳು ತಿಳಿಸಿವೆ.
ಕರೀಷ್ಮಾ ಪ್ರಕಾಶ್ ಮತ್ತು ಕ್ವಾನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸಿಇಒ ಧುರ್ವ್ ಚಿಟ್‌ಗೋಪೇಕರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸಮನ್ಸ್ ನೀಡಲಾಗಿದೆ.
ನಟಿಯರಾದ ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಮತ್ತು ಫ್ಯಾಷನ್ ಡಿಸೈನರ್ ಸಿಮನ್ ಖಾಂಭಟ್ಟ ಅವರಿಗೂ ಈ ವಾರ ನೋಟಿಸ್ ನೀಡಲಾಗುವುದು ಎನ್‌ಸಿಬಿ ಮಾಹಿತಿ ನೀಡಿದೆ.
Laxmi News 24×7