Breaking News

ಅರೆಬೆತ್ತಲೆ ಸ್ಥಿತಿಯಲ್ಲಿಯೇ ಪೊಲೀಸ್ ಠಾಣೆ ಕರೆತಂದ ಆರೋಪಿ

Spread the love

ಚಿತ್ರದುರ್ಗ : ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಸ್ನಾನಕ್ಕೆ ಹೋಗಿದ್ದ ವೇಣುಗೋಪಾಲ್, ಅದೇ ಅರೆಬೆತ್ತಲೆ ಸ್ಥಿತಿಯಲ್ಲಿ ಹೊರ ಬಂದಿದ್ದಾರೆ. ಠಾಣೆಗೆ ಬರುವಂತೆ ಹೆಡ್ ಕಾನ್ಸ್​ಟೇಬಲ್ ಚಂದ್ರಾನಾಯ್ಕ್ ಸೂಚಿಸಿದ್ದಾರೆ. ಈ ವೇಳೆ ಅದೇ ಅರೆಬೆತ್ತಲೆ ಸ್ಥಿತಿಯಲ್ಲೇ ಕೈಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಆಗಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರ್​ಎಸ್​ಎಸ್​ ಕಾರ್ಯಕರ್ತ ವೇಣುಗೋಪಾಲ್ ಮೇಲೆ ಪೊಲೀಸರು ಅನಾಗರಿಕ ವರ್ತನೆ ತೋರಿದ್ದಾರೆಂದು ಆರೋಪಿಸಿ ಕೆಲವರು ಕಿಡಿ ಕಾರಿದ್ದಾರೆ. ಇನ್ನೂ ಕೆಲವರು ರೌಡಿಶೀಟರ್ ಆಗಿರುವ ವೇಣುಗೋಪಾಲ್ ದುರುದ್ದೇಶದಿಂದ ಅರೆಬೆತ್ತಲೆಯಾಗಿ ಬಂದು ಹುಚ್ಚಾಟ ಮೆರೆದಿದ್ದಾನೆ. ಆ ಮೂಲಕ ಕರ್ತವ್ಯ ನಿರತ ಪೊಲೀಸರ ಮನೋಸ್ಥೈರ್ಯ ಕುಗ್ಗಿಸಲು ಯತ್ನಿಸಿದ್ದಾನೆಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಏಕಕಾಲಕ್ಕೆ ಪಿಡಿಒಗಳಿಗೆ ಗ್ರೂಪ್‌ ‘ಬಿ’ಗೆ ಬಡ್ತಿ ನೀಡಲು ಆಗ್ರಹ

Spread the loveಚಿತ್ರದುರ್ಗ: ’16 ವರ್ಷಗಳಿಂದಲೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಡ್ತಿಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಏಕಕಾಲಕ್ಕೆ ಗ್ರೂಪ್‌ ‘ಬಿ’ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ