Breaking News

ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವಕ ಬರ್ಬರವಾಗಿ ಕೊಲೆ

Spread the love

ಚಿಕ್ಕೋಡಿ: ಎಂಟು ತಿಂಗಳ ಹಿಂದೆಯಷ್ಟೇಮದುವೆಯಾಗಿದ್ದ ಯುವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ- ಕಾತ್ರಾಳ ರಸ್ತೆ ನಡುವೆ ನಡೆದಿದೆ.

ಚಿಂತಾಮಣಿ ಬಂಡಗರ (26) ಕೊಲೆಯಾದ ಯುವಕನಾಗಿದ್ದು, ತಡರಾತ್ರಿ 10 ಗಂಟೆ ಸುಮಾರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಐನಾಪೂರದಿಂದ ಕಾತ್ರಾಳ ಕಡೆ ಬೈಕ್ ನಲ್ಲಿ ತೆರಳುವಾಗ ಹಿಂಬದಿಯಿಂದ ಲಾಂಗ್ ನಿಂದ ಹೊಡೆದು ಕೊಲೆ ಮಾಡಲಾಗಿದೆ.

ಕೊಲೆಯಾದ ಯುವಕ ಚಿಂತಾಮಣಿ ಬಂಡಗರ, ಬೆಳಗಾವಿ‌ ಜಿಲ್ಲೆ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ನಿವಾಸಿಯಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಐನಾಪೂರ ಗ್ರಾಮದಲ್ಲಿ ಮೆಡಿಕಲ್​​ ಶಾಪ್​​ ಹಾಕಿದ್ದನಂತೆ. ಕೆಲಸ ಮುಗಿಸಿ ವಾಪಸ್​ ಆಗುತ್ತಿದ್ದಾಗ ದಾಳಿ ಮಾಡಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಘಟನಾ ಸ್ಥಳಕ್ಕೆ ಆಗಮಿಸಿರೋ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.


Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ