ಬೆಂಗಳೂರು :ಸರ್ಕಾರದ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ನಮ್ಮ ಬೇಡಿಕೆಗಳನ್ನು ನಿರ್ದಿಷ್ಟಾವಧಿಯಲ್ಲಿ (ಕಾಲಮಿತಿಯಲ್ಲಿ) ಈಡೇರಿಸಲು ಕ್ರಮವಹಿಸುವ ಬಗ್ಗೆ ಸನ್ಮಾನ ಸಚಿವರಿಗೆ ಹಾಗೂ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕು. ಕ. ಸೇವೆಗಳು ಹಾಗೂ ವೈ. ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವರಿಗೆ ಅಧಿಕೃತವಾಗಿ ಪತ್ರದ ಮುಖೇನ ಈಗಾಗಲೇ ತಿಳಿಸಲಾಗಿದೆ. ಅದಲ್ಲದೆ ಸಂಘದ ವತಿಯಿಂದ ಗೌರವಾಧ್ಯಕ್ಷರಾದ ಮಾನ್ಯ ಶ್ರೀ ಆಯನೂರು ಮಂಜುನಾಥ್ ರವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಮಿತಿ ರಚನೆ ವಿಷಯವಾಗಿ ದೂರವಾಣಿ ಮುಖೇನ ಆಗ್ರಹಿಸಿದ್ದಾರೆ ಎಂದು ತಿಳಿಸಿದೆ.
ಎಲ್ಲಾ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ (ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ಇತರೆ ಸಿಬ್ಬಂದಿಗಳು) ಹಿತ ಕಾಯುವಲ್ಲಿ ಮತ್ತು ನೌಕರರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸಂಘವು ಕಟಿ ಬದ್ಧವಾಗಿದೆ ಈ ಹಿನ್ನಲೆಯಲ್ಲಿ
ಮೇ. 29 ರೊಳಗಾಗಿ ಸಮಿತಿ ರಚನೆಯಾಗದಿದ್ದಲ್ಲಿ, ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ (ಅಸಹಕಾರ ಚಳುವಳಿ ಹೋರಾಟ) ಹೋರಾಟಕ್ಕೆ ಅಣಿಯಾಗಲು ತಿಳಿಸುತ್ತಾ ಮತ್ತು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಯಾವುದೇ ಒತ್ತಡಕ್ಕೂ ಸಂಘವು ಬಗ್ಗುವುದಿಲ್ಲ (ಎಲ್ಲಾ ನೌಕರರ ಹಿತವೇ; ಸಂಘಕ್ಕೆ ಪರಮೋಧರ್ಮ) ಎಂದು ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಯಮೋಜಿ ತಿಳಿಸಿದ್ದಾರೆ.