Breaking News

ಹಿಮಾಲಯ ಕರಗಲ್ಲ ಅಂತಾ ಅಂದುಕೊಂಡಿದ್ವಿ. ಆದ್ರೆ ಇವತ್ತು ಕರಗಿ ಹೋಯ್ತು. ಎಸ್.ಪಿ.ಬಿ ಅವರು ನಾದಬ್ರಹ್ಮ ಹಂಸಲೇಖ

Spread the love

 

ಬೆಂಗಳೂರು : ಎಸ್​ಪಿಬಿ ವಿದ್ಯೆಯಲ್ಲೇ ವಿದ್ಯಾವಂತರು. ನನ್ನ ಲೌಖಿಕ ಜ್ಞಾನದಿಂದ ನಾನು ಬದುಕು ಕಟ್ಟಿಕೊಂಡೆ ಅಂತಾ ತಿಳಿಸುತ್ತಿದ್ರು. ಜಾಣತನದಿಂದ ಜ್ಞಾನವನ್ನು ಖರ್ಚು ಮಾಡಿ ಅಂತಾ ಎಸ್.ಪಿ.ಬಿ ತಿಳಿಸುತ್ತಿದ್ರು. ನನ್ನ ಸಂಗೀತದ ಸಂಗಾತಿ ಎಸ್.ಪಿ.ಬಿ. ನಾನು ಮಾಡಬೇಕಿರೋ ಕೆಲಸವನ್ನು ನೆನಪಿಸಿಕೊಟ್ಟು ಹೋದ್ರು. ಎಸ್.ಪಿ.ಬಿಯನ್ನು ಗುರುತಿಸಿದವರು ಎಸ್.ಜಾನಕಿ ಅಮ್ಮ. ಹೈದರಾಬಾದ್ನಲ್ಲಿ ಯಾವುದೋ ಒಂದು ಕಾಂಪಿಟೇಷನಲ್ಲಿ ಎಸ್.ಪಿ.ಬಿ ಎರಡನೇ ಸ್ಥಾನ ಗಿಟ್ಟಿಸಿದ್ರು. ಅವರನ್ನು ಗುರುತಿಸಿ ತಂದವರು ಎಸ್.ಜಾನಕಿ. ಪಂಚಾಕ್ಷರಿ ಗವಾಯಿ ಸಿನಿಮಾದಲ್ಲಿ ನಮ್ಮಿಬ್ಬರ ಕಾಂಬಿನೇಷನ್ ದೊಡ್ಡ ಹಿಟ್ ಆಗಿತ್ತು.ಈ ಸಿನಿಮಾಗಾಗಿ ಅವರು ತುಂಬಾನೇ ಪ್ರ್ಯಾಕ್ಟೀಸ್ ಮಾಡಿದ್ದರು. ಈ ಸಿನಿಮಾದ ಹಾಡಿನ ರೆಕಾರ್ಡಿಂಗ್​​ನಲ್ಲಿ ಅವರೇ ಸ್ಟುಡಿಯೋದಲ್ಲಿ ಒಬ್ಬರೇ ಹಾಡಿದ್ದರು. ಕನ್ನಡದಕ್ಕೆ ಒಂದು ರಾಷ್ಟ್ರ ಪ್ರಶಸ್ತಿ ಬರಬೇಕು ಅನ್ನೋದು ಎಸ್‌.ಪಿ.ಬಿ ಕನಸಾಗಿತ್ತು. ಅದು ಪಂಚಾಕ್ಷರಿ ಗವಾಯಿ ಸಿನಿಮಾದಲ್ಲಿ ಸಾಧ್ಯವಾಯ್ತು ಅಂತಾ ನೆನೆದರು.ಎಸ್​ಪಿಬಿ ನೆನೆದು ನಾದಬ್ರಹ್ಮ ಹಂಸಲೇಖ ಅವರು ಭಾವುಕರಾದ್ರು.. ಮಾಧ್ಯಮಗಳ ಜೊತೆ ಮಾತನಾಡಿದ ನಾದಬ್ರಹ್ಮ.. ಹಿಮಾಲಯ ಕರಗಲ್ಲ ಅಂತಾ ಅಂದುಕೊಂಡಿದ್ವಿ. ಆದ್ರೆ ಇವತ್ತು ಕರಗಿ ಹೋಯ್ತು. ಎಸ್.ಪಿ.ಬಿ ಅವರು ಹೋಗಿದ್ದಾರೆ ಅಂತಾ ಭಾವುಕರಾದರು.


Spread the love

About Laxminews 24x7

Check Also

ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ

Spread the love ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ ಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ