Breaking News

ಬೆಳಗಾವಿ:ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ, ಕೋವಿಡ್-19 ರೋಗಿಗಳ ಪರಿಸ್ಥಿತಿ ಕರುಣಾಜನಕ!

Spread the love

ಬೆಳಗಾವಿ :ಕೋವಿಡ್-19 ರೋಗಿಗಳು ತಮಗೆ ತಾವೇ ಅಟೆಂಡರ್ ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವಾರ ಒಬ್ಬ ಕೋವಿಡ್ ರೋಗಿ ಇಲ್ಲಿಗೆ ದಾಖಲಾಗಿದ್ದರು. ಕೋವಿಡ್ ಅಲ್ಲದ ಅವರ ಪತ್ನಿಯೇ ಅವರ ಸಹಾಯಕರಾಗಿ ಆಸ್ಪತ್ರೆಯಲ್ಲಿ ನಿಲ್ಲಬೇಕಾಯಿತು. ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಇದೀಗ ಪತ್ನಿಯ ಕೋವಿಡ್-19 ಪರೀಕ್ಷೆ ಮಾಡಿಸಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತೀರಿಹೋದ ತಮ್ಮ ಪತಿಯ ಪರಿಸ್ಥಿತಿ ಕೊನೆಯವರೆಗೂ ಚಿಂತಾಜನಕವಾಗಿತ್ತು ಎನ್ನುತ್ತಾರೆ ಮಹಿಳೆ.

ನಿನ್ನೆ ಅಥಣಿಯ ಯುವಕರೊಬ್ಬರು ಟ್ವೀಟ್ ಮಾಡಿ, ನಾನು ನಿನ್ನೆ ಈ ಆಸ್ಪತ್ರೆಗೆ ದಾಖಲಾದೆ. ಕೋವಿಡ್-19 ವಾರ್ಡ್ ನ ಅವ್ಯವಸ್ಥೆ, ಅಶುಚಿತ್ವ ಕಂಡು ಬೇರೆ ರೋಗ ಕೂಡ ಬರಬಹುದು ಎಂಬ ಆತಂಕ ನನಗೆ ಕಾಡುತ್ತಿದೆ. ನನ್ನನ್ನು ದಯವಿಟ್ಟು ಅಥಣಿಗೆ ವರ್ಗಾಯಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಿಐಎಂಎಸ್ ನಿರ್ದೇಶಕ ವಿನಯ್ ದಸ್ತಿಕೊಪ್, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮಲ್ಲಿ ಸಾಕಷ್ಟು ಸಿಬ್ಬಂದಿಯಿದ್ದಾರೆ. ತಮ್ಮ ಸಹಾಯಕರನ್ನೇ ಬರಲು ಹೇಳಿ ಎಂದು ನಾವು ರೋಗಿಗಳಿಗೆ ಹೇಳಿಲ್ಲ ಎನ್ನುತ್ತಾರೆ.

ಸಹಾಯಕರು ರೋಗಿಗಳು ಮಕ್ಕಳಾಗಿದ್ದರೆ ಮಾತ್ರ ಬೇಕಾಗುತ್ತದೆ. ಕೊರೋನಾ ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಕೋವಿಡ್-19 ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕೋವಿಡ್ ಕೇರ್ ಕೇಂದ್ರಗಳನ್ನು ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆಯಿರುವ ಕೋವಿಡ್-19 ರೋಗಿಗಳನ್ನು ಮಾತ್ರ ಬಿಐಎಂಎಸ್ ಗೆ ವರ್ಗಾಯಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹೀರೇಮಠ್ ತಿಳಿಸಿದ್ದಾರೆ.

ಕೋವಿಡ್-19 ರೋಗಿಗಳು ತಮಗೆ ತಾವೇ ಅಟೆಂಡರ್ ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವಾರ ಒಬ್ಬ ಕೋವಿಡ್ ರೋಗಿ ಇಲ್ಲಿಗೆ ದಾಖಲಾಗಿದ್ದರು. ಕೋವಿಡ್ ಅಲ್ಲದ ಅವರ ಪತ್ನಿಯೇ ಅವರ ಸಹಾಯಕರಾಗಿ ಆಸ್ಪತ್ರೆಯಲ್ಲಿ ನಿಲ್ಲಬೇಕಾಯಿತು. ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಇದೀಗ ಪತ್ನಿಯ ಕೋವಿಡ್-19 ಪರೀಕ್ಷೆ ಮಾಡಿಸಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತೀರಿಹೋದ ತಮ್ಮ ಪತಿಯ ಪರಿಸ್ಥಿತಿ ಕೊನೆಯವರೆಗೂ ಚಿಂತಾಜನಕವಾಗಿತ್ತು ಎನ್ನುತ್ತಾರೆ ಮಹಿಳೆ.

ನಿನ್ನೆ ಅಥಣಿಯ ಯುವಕರೊಬ್ಬರು ಟ್ವೀಟ್ ಮಾಡಿ, ನಾನು ನಿನ್ನೆ ಈ ಆಸ್ಪತ್ರೆಗೆ ದಾಖಲಾದೆ. ಕೋವಿಡ್-19 ವಾರ್ಡ್ ನ ಅವ್ಯವಸ್ಥೆ, ಅಶುಚಿತ್ವ ಕಂಡು ಬೇರೆ ರೋಗ ಕೂಡ ಬರಬಹುದು ಎಂಬ ಆತಂಕ ನನಗೆ ಕಾಡುತ್ತಿದೆ. ನನ್ನನ್ನು ದಯವಿಟ್ಟು ಅಥಣಿಗೆ ವರ್ಗಾಯಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಿಐಎಂಎಸ್ ನಿರ್ದೇಶಕ ವಿನಯ್ ದಸ್ತಿಕೊಪ್, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮಲ್ಲಿ ಸಾಕಷ್ಟು ಸಿಬ್ಬಂದಿಯಿದ್ದಾರೆ. ತಮ್ಮ ಸಹಾಯಕರನ್ನೇ ಬರಲು ಹೇಳಿ ಎಂದು ನಾವು ರೋಗಿಗಳಿಗೆ ಹೇಳಿಲ್ಲ ಎನ್ನುತ್ತಾರೆ.

ಸಹಾಯಕರು ರೋಗಿಗಳು ಮಕ್ಕಳಾಗಿದ್ದರೆ ಮಾತ್ರ ಬೇಕಾಗುತ್ತದೆ. ಕೊರೋನಾ ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಕೋವಿಡ್-19 ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕೋವಿಡ್ ಕೇರ್ ಕೇಂದ್ರಗಳನ್ನು ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆಯಿರುವ ಕೋವಿಡ್-19 ರೋಗಿಗಳನ್ನು ಮಾತ್ರ ಬಿಐಎಂಎಸ್ ಗೆ ವರ್ಗಾಯಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹೀರೇಮಠ್ ತಿಳಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ

Spread the love ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ