Breaking News

ಐಷಾರಾಮಿ ವಾಹನದಲ್ಲಿ ದನಗಳ್ಳತನ; ಇಬ್ಬರ ಬಂಧನ ಪರಾರಿಯಾದ ಮೂವರಿಗೆ ಶೋಧ

Spread the love

ಶಿರಸಿ: ಐಷಾರಾಮಿ ವಾಹನದಲ್ಲಿ ಬಂದು ದನಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ದನಗಳ್ಳರಿಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವೇಕಾನಂದನಗರ ಮತ್ತು ಮರಾಠಿಕೊಪ್ಪದಲ್ಲಿ ದನಗಳ್ಳತನ ಆದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ದೇವರಾಜ್, ಸಿ.ಪಿ.ಐ ರಾಮಚಂದ್ರ ನಾಯಕ, ಪಿ.ಎಸ್.ಐ ಭಿಮಾಶಂಕರ ಸಿನ್ನೂರ ಸಂಗಣ್ಣ ರವರ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.

ಪಿ.ಎಸ್.ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 3-30ರ ಸುಮಾರಿಗೆ ದನಗಳನ್ನು ಸಾಗಾಟಮಾಡುತ್ತಿದ್ದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಕೋಟೆಕೆರೆ ಜಂಕ್ಷನ್ ಹತ್ತಿರ ನಾಕಾಬಂದಿ ಮಾಡಿ ವಾಹನಗಳನ್ನು ಚಕ್ ಮಾಡುತ್ತಿರುವಾಗ ಬಂದ ಫಾರ್ಚುನರ್ ಕಾರ್ ಹಾಗೂ ಕ್ರೇಟಾ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಫಾರ್ಚುನರ್ ಕಾರಿನಲ್ಲಿದ್ದ ಮೂವರು ವಾಹವನ್ನು ಬಿಟ್ಟು ಓಡಿ ಹೊಗಿದ್ದು ಮತ್ತು ಕ್ರೇಟಾ ಕಾರಿನಲ್ಲಿದ್ದ ಇಬ್ಬರು ತಪ್ಪಿಸ್ಕೊಳ್ಳಲು ಯತ್ನಿಸುತ್ತಿದ್ದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಫಾರ್ಚುನರ್ ಮತ್ತು ಕ್ರೇಟಾ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ