ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಬಂಧನವು ಸದ್ಯದ ಮಟ್ಟಿಗೆ ಬಹು ಚರ್ಚಿತ ವಿಷಯವಾಗಿದೆ. ಕುಂದ್ರಾ ಬಂಧನವಾದಾಗಿನಿಂದ ಅವರ ಕುರಿತಾದ ಕರಾಳ ಸಂಗತಿಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ.
ಹಾಟ್ಶಾಟ್ಸ್ ಮತ್ತು ಇತರೆ ವೆಬ್ಸೈಟ್ಗಳಿಗಾಗಿ ಬೋಲ್ಡ್ ಸಿನಿಮಾಗಳಲ್ಲಿ ನಟಿಸಿರುವ ಮಾಡೆಲ್ ಜೊಯಾ ರಾಥೋಡ್ ಅವರು ರಾಜ್ ಕುಂದ್ರಾರಿಂದ ಆಫರ್ ಸ್ವೀಕರಿಸಿದ್ದಾಗಿ ಮಾಧ್ಯಮವೊಂದಕ್ಕೆ ಬಹಿರಂಗಪಡಿಸಿದ್ದಾರೆ.
ಹಾಟ್ಶಾಟ್ಸ್ ಆಯಪ್ಗಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸುವಂತೆ ಕುಂದ್ರಾ ಅವರ ಆಪ್ತ ಸಹಾಯಕ ಮತ್ತು ಉದ್ಯಮ ಪಾಲುದಾರ ಉಮೇಶ್ ಕಾಮತ್, ಅನೇಕ ಬಾರಿ ನನಗೆ ಕರೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಬಂಧನಕ್ಕೂ ಮುಂಚೆ ಕಾಮತ್ ಜೊಯಾಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದರಂತೆ. ನಾನು ಹೊರಗಿರುವುದರಿಂದ ಆಫೀಸ್ನಲ್ಲಿ ಆಡಿಷನ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ಕಾಮತ್, ವಾಟ್ಸ್ಆಯಪ್ ಮೂಲಕವೇ ಬೆತ್ತಲೇ ಆಡಿಷನ್ ನೀಡುವಂತೆ ಜೊಯಾಗೆ ಕೇಳಿದ್ದರಂತೆ. ಆತನ ಮನವಿಗೆ ನಿರಾಕರಿಸಿದರೂ ಪದೇಪದೆ ಕರೆ ಮಾಡುತ್ತಿದ್ದರು ಎಂದು ಜೊಯಾ ಆರೋಪಿಸಿದ್ದಾರೆ.
ಸ್ಕ್ರಿಪ್ಟ್ ತಿಳಿಯದೇ ಬೆತ್ತಲೆ ಆಡಿಷನ್ ಕೊಡಲಾಗದು ಎಂದು ಜೊಯಾ ನಿರಾಕರಿಸಿದರೂ ಆಫರ್ ಒಪ್ಪಿಕೊಳ್ಳುವಂತೆ ಕಾಮತ್ ದುಂಬಾಲು ಬಿದ್ದಿದ್ದನಂತೆ. ವಯಸ್ಕರ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡರೆ ದಿನಕ್ಕೆ 20 ಸಾವಿರ ರೂ. ಕೊಡುವುದಾಗಿ ಆಫರ್ ನೀಡಿದ್ದರು ಎಂದು ಜೊಯಾ ತಿಳಿಸಿದ್ದಾರೆ.
ಹಾಟ್ಶಾಟ್ಸ್ಗಾಗಿ ಕೆಲಸ ಮಾಡುವ ರಾಯ್ ಎಂಬಾತನೂ ಸಹ ಇದೇ ವಿಚಾರಕ್ಕೆ ಕರೆ ಮಾಡಿದ್ದ. ತಾನೂ ಯುಕೆ ಮೂಲದವನು ಎಂದು ಹೇಳಿಕೊಂಡಿದ್ದ. ಹಾಟ್ಶಾಟ್ಸ್ಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲೆ ವೆಬ್ಸೀರಿಸ್ ಮಾಡುತ್ತಿರುವುದಾಗಿ ಹೇಳಿದ. ನಮ್ಮೊಂದಿಗೆ ಕೆಲಸ ಮಾಡಲು ಒಪ್ಪಿದರೆ ದಿನವೊಂದಕ್ಕೆ 70 ಸಾವಿರ ರೂ. ಕೊಡುವುದಾಗಿ ಆಫರ್ ಮಾಡಿದ ಎಂದು ಜೊಯಾ ಆರೋಪ ಮಾಡಿದ್ದಾರೆ. ಆಫರ್ ನಿರಾಕರಿಸಿದಾಗ ಬೋಲ್ಡ್ ಸಿನಿಮಾಗಳಲ್ಲೇ ನಟಿಸಿರುವಾಗ ಬೆತ್ತಲೆ ವೆಬ್ ಸೀರಿಸ್ನಲ್ಲಿ ನಟಿಸಲು ನಿಮಗೇನು ಸಮಸ್ಯೆ ಎಂದು ರಾಯ್ ಕೇಳಿದ್ದನಂತೆ. ಪದೇಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಮನವೊಲಿಸಲು ಸಾಕಷ್ಟು ಮನಸ್ಸು ಮಾಡಿದ್ದರು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ ಜೊಯಾ.
ಇನ್ನು ಜೊಯಾ ಅವರು ಬಡೆ ಅಚ್ಚೇ ಲಗ್ತೆ ಹೈನ್, ಸೌಭಾಗ್ಯವತಿ ಭವ ಮತ್ತು ಫಿಯರ್ ಫೈಲ್ಸ್ ಹೆಸರಿನ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. 2011ರಿಂದ ಬೋಲ್ಡ್ ಸಿನಿಮಾಗಳಲ್ಲಿ ಜೊಯಾ ನಟಿಸುತ್ತಿದ್ದಾರೆ. ಆದರೆ, ಬೆತ್ತಲೆಯಾಗಿ ನಟಿಸಲು