Breaking News

ಅನಗತ್ಯವಾಗಿ ಮಹಾರಾಷ್ಟ್ರ ವಿಷಬೀಜ ಬಿತ್ತುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಯತ್ನ

Spread the love

  ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ತಾಂತ್ರಿಕ ಕಾರಣಕ್ಕಾಗಿ ಸ್ಥಳ ಬದಲಾಯಿಸಲು ತೆಗೆದಿರಿಸಲಾಗಿರುವ
  ಛತ್ರಪತಿ ಶಿವಾಜಿ ಪುತ್ಥಳಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗಿದೆ ಎಂದು ಮಹಾರಾಷ್ಟ್ರ ಆರೋಪಿಸಿದ್ದು, ಪುತ್ಥಳಿ ಮರುಸ್ಥಾಪನೆಗೆ ಆಗ್ರಹಿಸಿದೆ.
ತನ್ಮೂಲಕ ಕರ್ನಾಟಕದ ಪಕ್ಕಾ ಆಂತರಿಕ ವಿದ್ಯಮಾನದಲ್ಲಿ ಅನಗತ್ಯವಾಗಿ ಮಹಾರಾಷ್ಟ್ರ ಮೂಗು ತೂರಿಸುವ ಯತ್ನ ನಡೆಸುತ್ತಿದೆ. ಅಲ್ಲದೆ ಅನಗತ್ಯಾವಾಗಿ ವಿಷಬೀಜ ಬಿತ್ತುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಯತ್ನಿಸುತ್ತಿದೆ.
ಸ್ಥಳೀಯ ಕೆಲವು ಸಮಸ್ಯೆಗಳ ಕಾರಣಕ್ಕಾಗಿ ಶಿವಾಜಿ ಪುತ್ಥಳಿಯನ್ನು ಬದಲೀ ಸ್ಥಳದಲ್ಲಿ ಸ್ಥಾಪಿಸುವುದಕ್ಕಾಗಿ ತೆಗೆದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಮಹಾರಾಷ್ಟ್ರ ಇಲ್ಲದ ವಿವಾದ ಕೆದಕಿ  ಕಾಲು ಕೆದರಿ ಜಗಳಕ್ಕೆ ಮುಂದಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಪೂರ್ಣಾಕೃತಿ ಪ್ರತಿಮೆಯನ್ನು ಗ್ರಾಮ ಪಂಚಾಯಿತಿಯ ಪೂರ್ವ ಅನುಮತಿಯನ್ನು ಪಡೆದೇ  ಸ್ಥಾಪಿಸಲಾಗಿತ್ತು. ಆದರೂ ಇದನ್ನು ಅಜ್ಞಾತ ವ್ಯಕ್ತಿಗಳು ರಾತೋರಾತ್ರಿ ತೆಗೆದು ಹಾಕುವ ಪಾಪಕೃತ್ಯ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಗಡಿಭಾಗದ ಸಮನ್ವಯಕ ಸಚಿವರಾದ ಛಗನ್ ಭುಜಬಲ್ ಮತ್ತು ಮಂತ್ರಿ  ಏಕನಾಥ್ ಶಿಂಧೆ ಆರೋಪಿಸಿದ್ದಾರೆ.
ಕರ್ನಾಟಕ ಸರ್ಕಾರವು  ಈ ಕೃತ್ಯ ಜರುಗಿಸಿದವರ ವಿರುದ್ಧ  ಕೂಡಲೇ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಸಂಪೂರ್ಣ ದೇಶದ ಆರಾಧ್ಯ ದೇವರಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸನ್ಮಾನ ಪೂರ್ವಕವಾಗಿ ಮರುಪ್ರತಿಷ್ಠಾಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂಗತಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರು ಗಂಭೀರವಾಗಿ ಪರಿಗಣಿಸಿದ್ದು ಈ ಸಂಬಂಧದಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರೊಂದಿಗೆ ಶೀಘ್ರದಲ್ಲಿ ಚರ್ಚಿಸಲಿದ್ದಾರೆ ಎಂದಿದ್ದಾರೆ.
ಈ ಸಂಬಂಧ ಇನ್ನೋರ್ವ ಸಚಿವ ಜಯಂತ ಪಾಟೀಲ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.
ಒಟ್ಟಾರೆ ಅನಗತ್ಯವಾಗಿ ಕರ್ನಾಟಕದ ಸಣ್ಣ ಪುಟ್ಟ ವಿಷಯಗಳಲ್ಲಿ ಮೂಗು ತೂರಿಸುವ ಚಾಳಿಯನ್ನು ಮಹಾರಾಷ್ಟ್ರ ಮುಂದುವರಿಸಿದೆ.
ಕರ್ನಾಟಕ ತಕ್ಷಣ ಮಹಾರಾಷ್ಟ್ರಕ್ಕೆ ತಿರುಗೇಟು ನೀಡಬೇಕಿದೆ. ನಮ್ಮ ವಿಷಯ ನಾವು ನೋಡಿಕೊಳ್ಳುತ್ತೇವೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಖಡಕ್ಕಾಗಿ ಉತ್ತರಿಸಬೇಕಿದೆ.

Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ