ವಿಜಯನಗರ: ಕಲ್ಯಾಣ ಕರ್ನಾಟಕದ ಜೀವನಾಡಿ ಎಂದೇ ಖ್ಯಾತಿ ಪಡೆದ ತುಂಗಭದ್ರಾ ಜಲಾಶಯ ವಿದ್ಯುತ್ ದೀಪಗಳಿಂದ ಕಂಗೊಳಿಸ್ತಿದೆ.
ಈಗಾಗಲೇ ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು. ಡ್ಯಾಂನ 33 ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರನ್ನು ಹರಿಸಲಾಗ್ತಿದೆ. ಗೇಟ್ ಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಗಳನ್ನ ಅಳವಡಿಕೆ ಮಾಡಿ, ನೀರಿಗೆ ಬಣ್ಣ ಬಳಿದಂತೆ ಭಾಸವಾಗುತ್ತಿದೆ.
ಇನ್ನು ತುಂಗಭದ್ರಾ ಜಲಾಶಯದ ಪಾರ್ಕ್ಗೂ ಜೀವ ಕಳೆ ಬಂದಿದೆ. ಕತ್ತಲಾಗುತ್ತಿಂದೆ ಜಲಾಶಯದ ಸೌಂದರ್ಯ ಜನರನ್ನ ಸೆಳೆಯುತ್ತಿದೆ. 33 ಕ್ರಸ್ಟ್ ಗೇಟ್ ನೀರು ಯಾವಾಗ ಬಿಡ್ತಾರೋ ಎಂದು ಕಾತುರದಿಂದ ಕಾಯ್ತಿದ್ದ ಜನ ಇಂದು ಜಲಾಶಯದ ಸೌಂದರ್ಯ ಕಣ್ತುಂಬಿಕೊಳ್ತಿದ್ದಾರೆ. ಜಲಾಶಯದ ಗೇಟ್ ವೀಕ್ಷಿಸಲು ಬರೋ ಪ್ರವಾಸಿಗರು ಮೊಬೈಲ್ ನಲ್ಲಿ ಜಲಾಶಯದ ಸೌಂದರ್ಯವನ್ನು ಸೆರೆ ಹಿಡಿದಿದ್ದಾರೆ.