Breaking News

ವಿಶೇಷ ಜಿಲ್ಲಾಧಿಕಾರಿ: ಐಎಎಸ್‌ ಅಧಿಕಾರಿ ನೇಮಕಕ್ಕೆ ಸೂಚನೆ

Spread the love

 ಕೆಎಎಸ್ ಅಧಿಕಾರಿಗಳಾದ ಎಂ. ಕೆ.ಜಗದೀಶ್ ಮತ್ತು ಬಸವರಾಜ್ ಅವರನ್ನು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

 

ನಗರದ ವಕೀಲ ವಾಸುದೇವ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ‘ಐಎಎಸ್ ಅಧಿಕಾರಿಗಳನ್ನೇ ಈ ಹುದ್ದೆಗಳಿಗೆ ನೇಮಕ ಮಾಡಬೇಕು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿದೆ.

‘ಕರ್ನಾಟಕ ಭೂಕಂದಾಯ ಕಾಯ್ದೆಯ ಸೆಕ್ಷನ್ 136 (3) ಮತ್ತು ಸೆಕ್ಷನ್ 67 (2)ರ ಪ್ರಕಾರ ಕೆಎಎಸ್ ಅಧಿಕಾರಿಗಳನ್ನು ಈ ಹುದ್ದೆಗೆ ನೇಮಿಸಲು ಅಧಿಕಾರ ಇಲ್ಲ. 2014ರ ಅಕ್ಟೋಬರ್ 10ರ ಹೈಕೋರ್ಟ್ ಆದೇಶಕ್ಕೂ ಇದು ವಿರುದ್ಧ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ಭೂಕಂದಾಯ ಕಾಯ್ದೆ ಪ್ರಕಾರ ಅರೆನ್ಯಾಯಿಕ ಕಾರ್ಯ ನಿರ್ವಹಿಸಬೇಕಾಗಿರುವ ಕಾರಣ ವಿಶೇಷ ಜಿಲ್ಲಾಧಿಕಾರಿಗಳ ಹುದ್ದೆಗಳಿಗೆ ಐಎಎಸ್‌ ಅಧಿಕಾರಿಗಳನ್ನೇ ನೇಮಿಸಬೇಕು. ಒಂದು ತಿಂಗಳಲ್ಲಿ ಮಾರ್ಪಡಿಸಿದ ಆದೇಶ ಹೊರಡಿಸಬೇಕು’ ಎಂದು ಪೀಠ ತಿಳಿಸಿತು.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ