ಧಾರವಾಡ: ಮದ್ಯ ವ್ಯಸನಿಯಾಗಿ ಸದಾ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಹತ್ಯೆ ಮಾಡಿರುವ ಘಟನೆ ನಗರದ ತೇಲಗಾರ ಓಣಿಯಲ್ಲಿ ನಡೆದಿದೆ.
ಬಸವರಾಜ ಹಿರೇಕುಂಬಿ (36 ವ) ಎಂಬಾತನೇ ಹತ್ಯೆಗೀಡಾದ ವ್ಯಕ್ತಿ. ಈತ ಮದ್ಯವೆಸನಿಯಾಗಿದ್ದ. ಪ್ರತಿದಿನ ಮದ್ಯ ಕುಡಿಯುವುದಕ್ಕಾಗಿ ತನ್ನ ತಂದೆಗೆ ಹಣಕ್ಕಾಗಿ ಎಂದು ಪೀಡಿಸುತ್ತಿದ್ದ. ಸೋಮವಾರ ರಾತ್ರಿ ಕೂಡ ತನ್ನ ತಂದೆ ಫಕ್ಕೀರಪ್ಪನೊಂದಿಗೆ ಹಣ ಕೊಡುವಂತೆ ಜಗಳ ಮಾಡಿದ್ದ. ಈ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಫಕ್ಕೀರಪ್ಪ ಕಬ್ಬಿನ ಹಾರೆಕೋಲಿನಿಂದ ತನ್ನ ಮಗನನ್ನೇ ಹತ್ಯೆ ಮಾಡಿದ್ದಾನೆ.
ಇವರಿಬ್ಬರ ಮಧ್ಯೆ ದಿನನಿತ್ಯ ಇದೇ ರೀತಿ ಜಗಳ ನಡೆಯುತ್ತಿತ್ತು. ಆದರೆ, ನಿನ್ನೆ ತಾಳ್ಮೆ ಕಳೆದುಕೊಂಡ ಫಕ್ಕೀರಪ್ಪ ಮಗನನ್ನೇ ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿ ಫಕ್ಕೀರಪ್ಪನನ್ನು ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗಿದೆ