Breaking News

ರಾಜ್ಯ ಶಿಕ್ಷಣ ಇಲಾಖೆಯಿಂದ ಬೆಳಗಾವಿ ಡಿಡಿಪಿಐ ತಂಡಕ್ಕೆ ಅಭಿನಂದನಾ ಸಂದೇಶ

Spread the love

ಬೆಳಗಾವಿ–   ಎಸ್ಎಸ್ಎಲ್ ಸಿ ಪರೀಕ್ಷೆಯ ಮೊದಲ ಹಂತದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಬೆಳಗಾವಿ ಡಿಡಿಪಿಐ ಮತ್ತು ಅವರ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.
ಈ ಕುರಿತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಕೆ. ಎಸ್. ಕರಿಚಣ್ಣವರ ಸಂದೇಶ ಕಳಿಸಿದ್ದಾರೆ. ಅವರ ಸಂದೇಶ ಹೀಗಿದೆ –
“ಬೆಳಗಾವಿ ಜಿಲ್ಲೆಯಾದ್ಯಂತ ಇಂದು ದಿ: ೧೯-೦೭-೨೦೨೧ ರಂದು ನಡೆದ SSLC ಪರೀಕ್ಷೆಯ ಯಶಸ್ಸಿಗೆ ಕಾರಣರಾದ ಉಪ ನಿರ್ದೇಶಕರು(ಆಡಳಿತ) ಹಾಗೂ ತಂಡ,  (ಅಭಿವೃದ್ಧಿ) ಹಾಗೂ ತಂಡ, ಮತ್ತು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು & ಅವರ ತಂಡದವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದೇ ರೀತಿ ದಿ: ೨೨-೦೭-೨೦೨೧ ರ ಪರೀಕ್ಷೆಗೂ ಸಂಪೂರ್ಣ ತಯಾರಿ ಮಾಡಿಕೊಳ್ಳಲು ಕೋರಿದೆ”
 – ಕೆ. ಎಸ್. ಕರಿಚಣ್ಣವರ
   ನಿರ್ದೇಶಕರು, (ಪ್ರೌಢ ಶಿಕ್ಷಣ),
ಸಾರ್ವಜನಿಕ ಶಿಕ್ಷಣ ಇಲಾಖೆ,
ಬೆಂಗಳೂರು.

 

ಶೇ.99.68 ವಿದ್ಯಾರ್ಥಿಗಳು ಹಾಜರ್

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟೂ 35,308 ಜನರು ಎಸ್ಎಸ್ಎಲ್ ಸಿ ಪರೀಕ್ಷೆಗೆ ನೋಂದಾವಣಿ ಮಾಡಿಸಿಕೊಂಡಿದ್ದರು. ಅವರಲ್ಲಿ  35,197 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ರೆಗ್ಯುಲರ್ 89, ರಿಪೀಟರ್ 16, ಖಾಸಗಿ 6 ಸೇರಿ 111 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅಂದರೆ 99.68% ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

-ಎ.ಬಿ.ಪುಂಡಲಿಕ್, ಡಿಡಿಪಿಐ, ಬೆಳಗಾವಿ


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ