ಬೆಳಗಾವಿ: ವಿವಾಹಿತೆಯೊಬ್ಬಳನ್ನು ಪ್ರೀತಿಸುವುದಾಗಿ ತನ್ನ ಸ್ಟೇಟಸ್ನಲ್ಲಿ ಯುವಕನೊಬ್ಬ ಬರೆದುಕೊಂಡಿದ್ದು, ಇದರಿಂದ ಹೆದರಿದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿ ನಡೆದಿದೆ.
ಸುತಗಟ್ಟಿ ಗ್ರಾಮದ ಅಕ್ಷತಾ ಪೂಜಾರ್ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸುತಗಟ್ಟಿ ಗ್ರಾಮದ ಸಂತೋಷ ತನ್ನ ವಾಟ್ಸ್ಆಯಪ್ ಸ್ಟೇಟಸ್ಗೆ ಅಕ್ಷತಾರ ಫೋಟೋ ಹಾಕಿಕೊಂಡು ಅದರಲ್ಲಿ ಮೆಸೇಜ್ ಬರೆದಿದ್ದ. ಇದನ್ನು
ನೋಡಿ ಗಾಬರಿಯಿಂದ ಯುವತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏಳು ತಿಂಗಳ ಹಿಂದೆ ಕರಡಿಗುದ್ದಿ ಗ್ರಾಮದ ನಾಗರಾಜ್ ಎಂಬುವರ ಜತೆಗೆ ಅಕ್ಷತಾ ಅವರ ವಿವಾಹವಾಗಿತ್ತು. ಕೆಲವು ದಿನಗಳ ನಂತರ ಅವರು ತಮ್ಮ ತವರಿಗೆ ವಾಪಸ್ ಆಗಿದ್ದರು. ಇದನ್ನು ನೋಡಿದ್ದ ಸಂತೋಷ್ ತನ್ನ ವಾಟ್ಸ್ಆಯಪ್ ಸ್ಟೇಟಸ್ನಲ್ಲಿ ‘ನಿನ್ನ ಪ್ರೀತಿಸುತ್ತೇನೆ, ನಿನ್ನನ್ನು ಬಿಡುವುದಿಲ್ಲ, ನಿನ್ನ ಹೆಸರು ಬರೆದಿಟ್ಟು ವಿಷ ಕುಡಿದು ಸಾಯುತ್ತೇನೆ’ ಎಂದು ಸ್ಟೇಟಸ್ ಹಾಕಿಕೊಂಡಿದ್ದ. ಜತೆಗೆ ವಿಷವನ್ನೂ ಸೇವಿಸಿದ್ದ.
ಆದರೆ ಸ್ಟೇಟಸ್ನೋಡಿ ಯು