Breaking News

ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆಹೋಗಿ ಆಣೆ ಮಾಡಿ:ದರ್ಶನ್ಗೆ ಇಂದ್ರಜಿತ್ ಮರು ಸವಾಲು

Spread the love

ಬೆಂಗಳೂರು : ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡೋಣ. ನೀವು ವೇಟರ್ ಗೆ ಹೊಡೆದಿಲ್ಲ ಎಂದು ಆಣೆ ಮಾಡಿ ಎಂದು ನಟ ದರ್ಶನ್ ಅವರಿಗೆ ಪತ್ರಕರ್ತ ಇಂದ್ರಜಿತ್ ಲಂಕೇಶ್ ಮರು ಸವಾಲು ಹಾಕಿದರು.

ಇಂದು ಸಂಜೆ ಮಾಧ್ಯಮಗೋಷ್ಠಿ ನಡೆಸಿದ ನಟ ದರ್ಶನ್ ಅವರು ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದರು. ನಿಮ್ಮಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಇಂದ್ರಜಿತ್ ಅವರಿಗೆ ನೇರ ಸವಾಲು ಹಾಕಿದರು. ಇದಕ್ಕೆ ಉತ್ತರಿಸಲೆಂದು ಮಾಧ್ಯಮಗಳ ಎದುರು ಹಾಜರು ಆದ ಇಂದ್ರಜಿತ್, ದರ್ಶನ್ ಅವರಿಗೆ ಮರು ಸವಾಲು ಹಾಕಿದರು.

ದರ್ಶನ್ ಅವರು ವಿಚಲಿತರಾಗಿದ್ದಾರೆ. ಇದು ವಿಚಲಿತರಾಗುವ ಸಂದರ್ಭ ಅಲ್ಲ. ನಾ ಕೇಳ್ತಿರೋ ಪ್ರಶ್ನೆಗಳಿಗೆ ಉತ್ತರಿಸಲಿ ಸಾಕು. ನಾನು ದರ್ಶನ್ ಅವರಿಗೆ ಎರಡೇ ಪ್ರಶ್ನೆಗಳಿಗೆ ಕೇಳಿದ್ದೇನೆ. ಅವುಗಳಿಗೆ ಉತ್ತರಿಸಲಿ ಸಾಕು. ಅದನ್ನು ಬಿಟ್ಟು ವಿಚಲಿತರಾಗದೆ ಗಂಡಸು, ಗಂಡಸ್ತನ ಎನ್ನುವ ಪದಗಳನ್ನು ಉಪಯೋಗಿಸುವುದು ಸರಿಯಲ್ಲ. ಆ ಥರ ಶಬ್ದಗಳು ನನ್ನ ಬಾಯಿಯಿಂದ ಬರುವುದು ಬೇಡ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಲಾಯರ್ ಅವರನ್ನು ಕೂರಿಸಿಕೊಂಡ ವಿಚಾರವನ್ನು ಪ್ರಸ್ತಾಪಿಸಿದ ಇಂದ್ರಜಿತ್, ನಿಮ್ಮ ಹಾಗೂ ಪತ್ನಿ ಗಲಾಟೆ ವೇಳೆ ನೀವು ಲಾಯರ್ ನ್ನು ಯಾಕೆ ಕೂರಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ನೀವು ಹೋಟೆಲ್ ಗೆ ಗಂಡಸ್ತನ ತೋರಿಸೋಕೆ ಹೋಗಿದ್ದೀರಾ ? ಅರುಣಾ ಕುಮಾರಿಯನ್ನು ಗಂಡಸ್ತನ ತೋರಿಸಲೆಂದು ನಿಮ್ಮ ಫಾರ್ಮ್ ಹೌಸ್ ಗೆ ಕರೆಯಿಸಿಕೊಂಡಿದ್ದೀರಾ ? ಎಂದು ದರ್ಶನ್ ಅವರಿಗೆ ಪ್ರಶ್ನಿಸಿದರು ಇಂದ್ರಜಿತ್.

ಸೆಲೆಬ್ರಿಟಿ ಅನ್ ಎಜ್ಯುಕೆಟೆಡ್ ಅಂತಾ ಹೇಳಿಲ್ಲ :

ಇನ್ನು ನಾನು ಎಲ್ಲಿಯೂ ಸೆಲಬ್ರಿಟಿಸ್ ಅನ್ ಎಜ್ಯುಕೆಟೆಡ್ ಎಂದು ಹೇಳಿಲ್ಲ. ಸೆಬಬ್ರಿಟಿಸ್ ಗಳು ಇತರರಿಗೆ ಮಾದರಿಯಾಗಬೇಕೆಂದು ಹೇಳಿದ್ದೇನೆ. ನಿಮ್ಮ ನಡುವಳಿಕೆ , ಮಾತುಗಳು ಸರಿಯಾಗಿರಬೇಕು ಎಂದಿದ್ದೇನೆ ಎಂದರು.


Spread the love

About Laxminews 24x7

Check Also

ಮಕ್ಕಳ ಹಕ್ಕುಗಳ ರಕ್ಷಣೆ ಪೊಲೀಸರ ಆದ್ಯ ಕರ್ತವ್ಯ; ಪ್ರಕರಣಗಳಿಗೆ ತುರ್ತಾಗಿ ಸ್ಪಂದಿಸಲು ಪೊಲೀಸರಿಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕರೆ

Spread the loveಬೆಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಯ ಉಲ್ಲಂಘನೆ ಪ್ರಕರಣಗಳಿಗೆ ತುರ್ತಾಗಿ ಸ್ಪಂದಿಸಿ, ವರದಿ ಮಾಡಿಕೊಳ್ಳುವ ಮೂಲಕ ಮಕ್ಕಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ