ಕೊಡಗು : ಮಹಾ ಮಳೆಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಮಡಿಕೇರಿಯ ಆವಂದೂರು ಗ್ರಾಮದ ಕಿರು ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮೃತದೇಹ ಪತ್ತೆಯಾಗಿದೆ. ಬಾಬಿ ಚಿಣ್ಣಪ್ಪ(70) ಮೃತರಾಗಿದ್ದಾರೆ.
ಬಾಬಿ ಚಿಣ್ಣಪ್ಪ ನಿನ್ನೆ ಸಂಜೆ ಕಿರು ಹೊಳೆ ದಾಟುವಾಗ ಆಯತಪ್ಪಿ ಬಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ, ಪೊಲೀಸರು ಶೋಧ ಕಾರ್ಯಚರಣೆ ಮುಂದುವರೆಸಿದ್ದರು. ಆದ್ರೆ ಮಳೆ ಹೆಚ್ಚಾದ ಕಾರಣ ಕಾರ್ಯಚರಣೆ ಸ್ಥಗಿತಗೊಳಿಸಿದ್ದರು.
ಇಂದು ಬೆಳಿಗ್ಗೆ ಶೋಧ ಕಾರ್ಯಚರಣೆ ಮುಂದುವರೆದಿದ್ದು, ಘಟನೆ ನಡೆದ ಸ್ಥಳದ ಅನತಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಇದರೊಂದಿಗೆ ಮಹಾ ಮಳೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದೆ.
Laxmi News 24×7