ಚಿತ್ರದುರ್ಗ: ಕತ್ತೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಕೋಟೆ ನಾಡಿನಲ್ಲಿ ಕತ್ತೆ ಮದುವೆಯನ್ನು ಮಾಡಿ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ. ಜಿಲ್ಲೆಯ ಈಚಲನಾಗೇನಹಳ್ಳಿಯಲ್ಲಿ ಸಮೃದ್ಧ ಮಳೆ ಬೆಳೆಗಾಗಿ ಕತ್ತೆ ಮದುವೆ ಮಾಡಿ ವರುಣನಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ.
ತುಂತುರು ಮಳೆಯ ಸಂದರ್ಭದಲ್ಲಿ ಮಳೆಯಾಗದಿದ್ದರೆ ಮಳೆಗಾಗಿ ಮೊರೆಯಿಟ್ಟು ಸಾಂಪ್ರದಾಯಿಕವಾಗಿ ಕತ್ತೆಗಳ ಮದುವೆ ಮಾಡಿಸಿ, ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇವರಲ್ಲಿ ಮಳೆಯಾಗುವಂತೆ ಬೇಡಿಕೊಳ್ಳುವ ಈ ವಿಶೇಷ ಆಚರಣೆ ಪೂರ್ವಜರ ಕಾಲದಿಂದಲೂ ಚಾಲ್ತಿಯಲ್ಲಿದೆ. ಈಗಲೂ ಕೂಡ ರಾಜ್ಯದ ಹಲವಾರು ಭಾಗಗಳಲ್ಲಿ ಈ ಸಾಂಪ್ರದಾಯಿಕ ಆಚರಣೆ ಇನ್ನು ಜೀವಂತವಾಗಿರೋದು ವಿಶೇಷ.