ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದಿಷ್ಟು ಕ್ಯೂಟ್ ವಿಡಿಯೋಗಳಾಗಿದ್ದರೆ ಇನ್ನು ಕೆಲವು ಬೆಚ್ಚಿಬೀಳಿಸುವ ಕಥೆಯನ್ನು ಹೇಳುತ್ತವೆ. ಕೆಲವು ಭಯಾನಕ ಸನ್ನಿವೇಶಗಳೂ ಸಹ ಭಾರೀ ಚರ್ಚೆಯಾಗುತ್ತವೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ(Viral Video) ಕೂಡಾ ಅಂಥದ್ದೇ! ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಭಯವಾಗುತ್ತದೆ. ಕೆಲವರು ಇಂಥಹ ಭಯಾನಕ ದೃಶ್ಯವನ್ನು ಇನ್ನೂ ನೋಡಿಲ್ಲ ಎಂದು ಹೇಳಿದ್ದರೆ ಇನ್ನೊರ್ವರು, ನಾನಲ್ಲಿದ್ದಿದ್ದರೆ ಹೃದಯ ಬಡಿತವೇ ನಿಂತೋಗ್ಬಿಟ್ತಿತ್ತೇನೋ.. ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಭಾರೀ ಸುದ್ದಿಯಲ್ಲಿರುವುದಂತೂ ನಿಜ.
ಅರಣ್ಯದಲ್ಲಿರುವ ಪ್ರಾಣಿಗಳನ್ನು ನೋಡಲೆಂದು ಟೂರಿಸ್ಟ್ ವ್ಯಾನ್ನಲ್ಲಿ(Tourist Van) ತುಂಬಾ ಪ್ರವಾಸಿಗರು ಹತ್ತಿ ಕುಳಿತಿದ್ದಾರೆ. ಅರಣ್ಯದ ಮಧ್ಯೆ ವ್ಯಾನ್ ನಿಂತಂತೆಯೇ ಮೂರು ದೈತ್ಯಾಕಾರದ ಹುಲಿಗಳು(Tigers) ಒಂದಾದ ಮೇಲೊಂದು ಬಂದು ವಾಹನವನ್ನು ಸುತ್ತುವರೆದಿದೆ. ಅಷ್ಟೇ ಅಲ್ಲ. ವಾಹನವನ್ನು ತನ್ನ ಮುಂದಿನ ಎರಡು ಕಾಲುಗಳಿಂದ ಹಿದಿಡು ಪ್ರವಾಸಿಗರನ್ನು ಕೆಂಗಣ್ಣಿನಿಂದ ನೋಡಲು ಪ್ರಾರಂಭಿಸಿದೆ. ಹೊರಗಡೆಯಿಂದ ನೋಡಲು ಅದ್ಭುತ ದೃಶ್ಯವಾಗಿದ್ದರೂ.. ವ್ಯಾನ್ ಒಳಗೆ ಕುಳಿತಿರುವವರ ಪರಿಸ್ಥಿತಿ ಹೇಗಿರಬೇಡ? ವಿಡಿಯೋ ನೋಡಿ ನಿಮಗೇ ಅರ್ಥವಾದೀತು.
ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗಮನಿಸುವಂತೆ ಅನೇಕ ಪ್ರವಾಸಿಗರು ಟೂರಿಸ್ಟ್ ವಾಹನದಲ್ಲಿ ಕುಳಿತಿರುವುದು ಕಂಡು ಬರುತ್ತದೆ. ವಾಹನಕ್ಕೆ ಅಳವಡಿಸಲಾಗಿರುವ ತಂತಿ ಜಾಲರಿ ಮೂಲಕ ಹುಲಿಗಳನ್ನು ಇಣುಕಿ ನೋಡುತ್ತಿದ್ದಾರೆ. ಜನರು ವ್ಯಾನ್ ಒಳಗಿದ್ದರೂ ಸಹ ದೈತ್ಯಾಕಾರದ ಹುಲಿಗಳನ್ನು ನೋಡಿದಾಕ್ಷಣ ಭಯವಾಗದೇ ಇರುತ್ಯೇ?
ವ್ಯಾನ್ ಒಳಗೆ ಕುಳಿತಿರುವ ಪ್ರವಾಸಿಗರನ್ನು ಹುಲಿಗಳು ಹೆದರಿಸುತ್ತಿವೆ. ಹುಲಿಗಳನ್ನು ನೋಡುತ್ತಾ ಜನರು ಭಯಗೊಳ್ಳುತ್ತಿದ್ದಾರೆ. ನೋಡಿದಷ್ಟೂ ಹೆಚ್ಚು ಹತ್ತಿರಕ್ಕೇ ಬರುತ್ತಿದೆ ಹುಲಿಗಳು. ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 28 ಸಾವಿರಕ್ಕೂ ಹೆಚ್ಚು ಜನರು ವಿಡಿಯೋವನ್ನು ನೋಡಿದ್ದಾರೆ. ಓರ್ವರು ಇಂಥಹ ಭಯಾನಕ ದೃಶ್ಯವನ್ನು ನಾನು ಎಂದೂ ನೋಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಸುರಕ್ಷಿತವಾಗಿ ಅರಣ್ಯದಿಂದ ಹೊರಬರಲು ಸಾಧ್ಯವೇ? ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ.
Buffet lunch pic.twitter.com/61gjheO8GC
— Susanta Nanda (@susantananda3) July 10, 2021