ಕಿತ್ತೂರು – ಕ್ಷುಲ್ಲಕ ಕಾರಣಕ್ಕೆ ದಾಬಾ ಮಾಲಿಕನನ್ನು ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ.
ಖರೀದಿಸಿದ್ದ ಹೂವಿನ ಹಣ 1500 ರೂಗಳನ್ನು ಹೂವಿನ ವ್ಯಾಪಾರಿಗೆ ಕೊಡು ಎಂದು ಹೇಳಿದ್ದಕ್ಕೆ ಐವರು ಸೇರಿ ದಾಬಾ ಮಾಲಿಕ ಪ್ರಕಾಶ ಬಸವರಾಜ ನಾಗನೂರು (35) ಅವರನ್ನು ಕೊಲೆ ಮಾಡಿದ್ದರು.
ಮಹಮ್ಮದಶಫೀ @ ಸದ್ದಾಮ್ ರಫೀಕಅಹಮ್ಮದ ಬಡೇಗಾರ, ಶಬೀಲಅಹಮ್ಮದ ರಫೀಕಅಹಮ್ಮದ ಬಡೇಗಾರ, ಬಿಲಾಲ ಅಬ್ದುಲಹಕ್ಕ ಬಡೇಗಾರ, ಸರ್ಪರಾಜ ಮಹಮ್ಮದಶಾ ಬಡೇಗಾರ, ಶಾಹಾಬಾಜ ಮಹಮ್ಮದಶಾ ಬಡೇಗಾರ, ಇರ್ಪಾನ ಮೋದಿನಶಾ ಬಡೇಗಾರ, ಸಾಜೀದ ಶಬ್ಬೀರಅಹಮ್ಮದ ಬಡೇಗಾರ ಆರೋಪಿಗಳು.