ಬೆಂಗಳೂರು: ಮಂಡ್ಯ ಲೋಕಸಭಾ ಸದಸ್ಯರಾಗಿರುವ ಸುಮಲತಾ ಅಂಬರೀಶ್ ಇಂದು ( ಸೋಮವಾರ) ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿರುವ ಮುರುಗೇಶ್ ನಿರಾಣಿ ಅವರನ್ನು ಸಚಿವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಅಕ್ರಮ ಗಣಿಗಾರಿಗೆ ಕುರಿತಂತೆ ಹಲವಾರು ಮಾಹಿತಿಗಳನ್ನು ಸಲ್ಲಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಕಳೆದ ಹಲವು ದಿನಗಳಿಂದ ಕೆಆರ್ ಎಸ್ ವಿಚಾರವಾಗಿ ಮತ್ತು ಅಕ್ರಮ ಗಣಿಗಾರಿಗೆ ಕುರಿತಂತೆ ಸುಮಲತಾ ಅಂಬರೀಶ್ ಸುದ್ದಿಯಲ್ಲಿದ್ದಾರೆ. ಇಷ್ಟೇ ಅಲ್ಲದೆ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ಮಾತಿನ ಚಕಮಕಿ ಕೂಡ ರಾಜ್ಯದ ಜನರ ಗಮನ ಸೆಳೆದಿತ್ತು. ಈ ನಡುವೆ ಸಚಿವ ಮುರುಗೇಶ್ ಅವನ್ನು ಸಂಸದರು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.