Breaking News

ವಯಸ್ಸಲ್ಲದ ವಯಸ್ಸಿನ ಮಗಳ ಮದುವೆ ಮಾಡಿದ ಪೋಷಕರಿಗೆ ಬಿಗ್ ಶಾಕ್: ತಾಳಿ ಕಿತ್ತೆಸೆದು ಬಾಲಕಿ ಆಕ್ರೋಶ

Spread the love

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮದುವೆ ಮಾಡಲಾಗಿದ್ದು, ಆಕೆ ಆಕ್ರೋಶದಿಂದ ದಾಳಿಯನ್ನು ಕಿತ್ತೆಸೆದ ಘಟನೆ ನಡೆದಿದೆ.

ಜುಲೈ 7 ರಂದು ಹೊಸದುರ್ಗ ತಾಲೂಕಿನ ಗ್ರಾಮದಲ್ಲಿ ವಿರೋಧದ ನಡುವೆಯೂ ಪೋಷಕರು ಬಾಲಕಿಯನ್ನು ಮದುವೆ ಮಾಡಿದ್ದರು. ಬಲವಂತವಾಗಿ ತಾಳಿಕಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಿವಮೊಗ್ಗದಲ್ಲಿ ಪಿಯುಸಿ ಓದುತ್ತಿದ್ದ 16 ವರ್ಷದ ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದ ಪೋಷಕರು ಬಲವಂತವಾಗಿ ಸೋದರ ಮಾವನೊಂದಿಗೆ ಮದುವೆ ಮಾಡಿದ್ದರು.

ಬಾಲ್ಯವಿವಾಹ ವಿರೋಧಿಸಿದ ಬಾಲಕಿ, ಮಾವ ಕಟ್ಟಿದ ತಾಳಿಯನ್ನು ಕಿತ್ತೆಸೆದು ಪೋಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ತಂದೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾಳೆ. ವಿಡಿಯೋ ವೈರಲ್ ಆದ ನಂತರದಲ್ಲಿ ಚಿತ್ರದುರ್ಗ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದು ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಬಲವಂತವಾಗಿ ಮದುವೆ ಮಾಡಿದ ಪೋಷಕರು ಮತ್ತು ಸೋದರ ಸಂಬಂಧಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಚಿತ್ರದುರ್ಗ ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ

Spread the loveನವದೆಹಲಿ: ಚಿತ್ರದುರ್ಗ  ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾಗಿದ್ದರು. ಈ ಸಂಕಷ್ಟದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ