ಹುಬ್ಬಳ್ಳಿ: ಬಿಜೆಪಿ ರೈತ ಮೋರ್ಚಾದ ನಾಯಕ ಈಶ್ವರ ಗೌಡ ಅಣ್ಣನ ಮಗನ ಹತ್ಯೆಯಾಗಿದೆ. ಅಭಿಷೇಕ್ ಗೌಡರ್ ಪಾಟೀಲ್(22) ಹತ್ಯೆಯಾದ ಯುವಕ.
ಹುಬ್ಬಳ್ಳಿಯ ಗೋಪನಕೊಪ್ಪ ಅಮರ ಕಾಲೋನಿ ಕ್ರಾಸ್ ಬಳಿ ಘಟನೆ ನಡೆದಿದ್ದು ಸಂಜೆ ನಡೆದ ಘಟನೆಗೆ ಹುಬ್ಬಳ್ಳಿ ಜನ ದಂಗಾಗಿದ್ದಾರೆ. ಆರೋಪಿಗಳು ಚಾಕು ಹಾಕಿ ಅಭಿಷೇಕ್ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.