ದೆಹಲಿ: ದೆಹಲಿ ಪೊಲೀಸರ ವಿಶೇಷ ತಂಡ ಅಂತರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಪತ್ತೆಹಚ್ಚಿದ್ದು, ಬರೋಬ್ಬರಿ 2,500 ಕೋಟಿ ರೂಪಾಯಿ ಮೌಲ್ಯದ 354 ಕಿಲೋ ಗ್ರಾಮ್ ಉತ್ತಮ ಗುಣಮಟ್ಟದ ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಹರ್ಯಾಣದ ಮೂವರು ಹಾಗೂ ದೆಹಲಿ ಓರ್ವ ವ್ಯಕ್ತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ದೆಹಲಿ ಪೊಲೀಸ್ ವಿಶೇಷ ತಂಡ ಈವರೆಗೆ ಪತ್ತೆ ಹಚ್ಚಿದ ಅತೀ ದೊಡ್ಡ ಡ್ರಗ್ಸ್ ಜಾಲ ಇದಾಗಿದೆ. ಈ ಮೂಲಕ ಭಾರೀ ದೊಡ್ಡ ಪ್ರಮಾಣದ ಡ್ರಗ್ ಜಾಲ ಬಹಿರಂಗೊಂಡತಾಗಿದೆ. ನಾರ್ಕೊ ಭಯೋತ್ಪಾದನೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಶಂಕಿತರ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಸ್ಪೆಷಲ್ ಸೆಲ್ ನ ನೀರಜ್ ಠಾಕೂರ್ ಸುದ್ದಿಗಾರರ ಜತೆ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಈ ಬಗ್ಗೆ ಕಾರ್ಯಾಚರಣೆ ನಡೆಯುತ್ತಿತ್ತು. ಈ ಮಾದಕ ದ್ರವ್ಯ ಅಫ್ಘಾನಿಸ್ತಾನದಿಂದ ಬಂದಿರುವುದಾಗಿ ವರದಿ ಹೇಳಿದೆ. ಇದನ್ನು ಕಳ್ಳಸಾಗಾಣೆ ಮೂಲಕ ಮುಂಬಯಿ ಮತ್ತು ದೆಹಲಿಗೆ ಸಾಗಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.