Breaking News

ಭೀಕರ ಅಪಘಾತಕ್ಕೆ ಬಲಿ ಮೃತರು ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮದವರು

Spread the love

ಅಮಾವಾಸೆ ಪೂಜೆಗೆಂದು ತೆರಳಿದ್ದ ಯುವಕರಿಬ್ಬರು ಲಾರಿಗೆ ಹಿಂದಿನಿಂದ ಬೈಕ್ ಗುದ್ದಿಸಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸಮೀಪದ ನಿಪ್ಪಾಣಿ -ಮುದೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಟೋಲ್ ಗೇಟ್ ಹತ್ತಿರ ಟೋಲ್ ಹಣ ಕಟ್ಟಲು ನಿಂತಿದ್ದ ಲಾರಿಗೆ ಬೈಕ್ ಸವಾರರಿಬ್ಬರು ಹಿಂಬದಿಯಿಂದ ಗುದ್ದಿ ಅಪಘಾತವಾಗಿದೆ. ಸ್ಥಳದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆ ಶುಕ್ರವಾರ ರಾತ್ರಿ ೯ರ ವೇಳೆಗೆ ನಡೆದಿದೆ.
ಮೃತರು ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮದ ಸಿದ್ದಾರ್ಥ ಅಶೋಕ ಖೆಮಲಾಪುರೆ(೨೬) ಮತ್ತು ಪ್ರಮೋದ ಕರಿಯಪ್ಪಾ ನಾಯಿಕ(೨೬).

ಸಿದ್ದಾರ್ಥ ಅಶೋಕ ಖೆಮಲಾಪುರೆ ಕಬ್ಬೂರ ಪಟ್ಟಣದಲ್ಲಿ ಅಗ್ರೋ ಅಂಗಡಿ ಇಟ್ಟಿದ್ದರು. ಅಮಾವಾಸೆ ನಿಮಿತ್ಯವಾಗಿ ನಿಪ್ಪಾಣಿ ಸಮೀಪದ ಸ್ತವನಿದಿಗೆ ದೇವರಿಗೆಂದು ಹೋಗಿ ವಾಪಸ್ ತಮ್ಮೂರಿಗೆ ಬರುವಾಗ ಈ ಘಟನೆ ಸಂಭವಿಸಿದೆ.
ಈ ಕುರಿತು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಆರ್.ಆರ್.ಪಾಟೀಲ ಮತ್ತು ಪಿಎಸ್‌ಐ ಅಶೋಕ ಕುಳ್ಳುರ ಮತ್ತು ಸಿಬ್ಬಂದಿತೆರಳಿದ್ದರು.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ