ಬೆಂಗಳೂರು: ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಿಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಅಂಬರೀಶ್ ಅಣ್ಣನ ಬಗ್ಗೆ ಯಾರು ಮಾತನಾಡಿಲ್ಲ ಹೇಳಿ? ದಾರಿಯಲ್ಲಿ ಹೋಗುವ ದಾಸಪ್ಪ ಸಿಎಂ ಆಗಿದ್ದರನೂ ಇಂತಹ ಕೆಲಸಗಳನ್ನ ಮಾಡಿಯೇ ಮಾಡುತ್ತಾರೆ.
ಸರ್ಕಾರದ ಗೌರವದೊಂದಿಗೆ ಕಳುಹಿಸಿಕೊಟ್ಟಿದ್ದೀರಿ ಎಂದು ಹೇಳ್ತೀರಿ. ಮೊನ್ನೆ ಸಂಚಾರಿ ವಿಜಯ್ ಮೃತಪಟ್ಟಾಗಲೂ ಸರ್ಕಾರಿ ಗೌರವದಿಂದ ಅಂತ್ಯಕ್ರಿಯೆ ಮಾಡಲಾಗಿದೆ. ನೀವು ಸ್ವಂತವಾಗಿ ಏನು ಮಾಡಿದ್ದೀರಿ? ಅದರಿಂದ ನಿಮಗೆ ಒಂದಿಷ್ಟು ಲಾಭವಾಗಿದೆ. ಪುಣ್ಯ ಬಂದಿದೆ ಎಂದು ಹರಿಹಾಯ್ದರು.