Breaking News

ಮನೆಯಲ್ಲಿ ಯಾರಿಗೂ ಹೇಳದೆ ಹೋಗಿ ಕಾಣೆಯಾಗಿದ್ದಾಳೆ ದಿವ್ಯಶ್ರೀ

Spread the love

ಬೆಳಗಾವಿ : ದತ್ತ ರಾಮ್ ಹರಿಶ್ಚಂದ್ರ ಅನ್ವೇಕರ್ ಅವರ ಮಗಳು ದಿವ್ಯಶ್ರೀ ರಾಜೇಂದ್ರ  (ವಯಸ್ಸು ೨೭)   ಜೂನ್ ೨೯ ರಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿ ಕಾಣೆಯಾಗಿದ್ದಾಳೆ ಎಂದು ಜುಲೈ ೮ರಂದು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವ್ಯಶ್ರೀ ಪಾವುಸ್ಕರ (೨೭) ೪ ಅಡಿ ೮ ಇಂಚು ಎತ್ತರವಾಗಿದ್ದು ದುಂಡುಮುಖ, ಗೋಧಿ ಮೈಬಣ್ಣ ಉದ್ದ ಮೂಗು, ಎತ್ತರವಾದ ಹಣೆ, ಮೈಯಿಂದ ಸದೃಢವಾಗಿರುತ್ತಾಳೆ, ಹಾಗೂ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು ಕನ್ನಡ, ಹಿಂದಿ, ಮರಾಠಿ ಭಾಷೆಯನ್ನು ಮಾತನಾಡುತ್ತಾಳೆ.

ಈ ಚಹರೆಯುಳ್ಳ ಮಹಿಳೆ ಪತ್ತೆಯಾದಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಲ್ಲಿ ಟಿಳಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧ ೨೪೦೫೨೩೬, ಪೊಲೀಸ್ ಇನ್ಸ್ಪೆಕ್ಟರ್ ಟಿಳಕವಾಡಿ ೯೪೮೦೮೦೪೦೫೨, ಪಿ ಎಸ್ ಐ ಟಿಳಕವಾಡಿ ೯೪೮೦೮೦೪೧೧೨, ಪೊಲೀಸ್ ಕಂಟ್ರೋಲ್ ರೂಂ ಬೆಳಗಾವಿ ೦೮೩೧-೨೪೦೫೨೩೧/೨೪೦೫೨೫೫, ಪಿರ್ಯಾದಿ ೯೯೬೪೮೦೪೭೯೯ ದೂರವಾಣ ಸಂಖ್ಯೆಗೆ ಸಂಪರ್ಕಿಸಬೇಕೆಂದು ಟಿಳಕವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ