ಕೋಲಾರ: ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದ್ದರೆ, ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಪೂಜೆ ಮಾಡುತ್ತಿದ್ದಾರೆಂದು ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಟೀಕಿಸಿದ್ದಾರೆ.
ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಕೋವಿಡ್ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಈ ದೇಶವನ್ನು ಲಾಕ್‍ಡೌನ್ ಮಾಡಿದಾಗ ನಮ್ಮಲ್ಲಿ ಪ್ರಕರಣ 524 ಇತ್ತು. 21 ದಿನದಲ್ಲಿ ಎಲ್ಲವೂ ನಿರ್ನಾಮ ಆಗುತ್ತೆ ಎಂದರು. ಆದರೆ ಈಗ ಕೊರೊನಾ ಸೋಂಕು 14 ಲಕ್ಷಕ್ಕೆ ಬಂದಿದೆ ಎಂದು ವ್ಯಂಗವಾಡಿದರು.
ದೇಶದಲ್ಲಿರುವ ಸಮಸ್ಯೆಯನ್ನು ಬಿಟ್ಟು ಅಯೋಧ್ಯೆಯಲ್ಲಿ ಪೂಜೆ ಮಾಡುತ್ತಿದ್ದಾರೆ ಎಂದ ಅವರು, ಶ್ರೀರಾಮ ಅವರನ್ನು ನಮ್ಮನ್ನು ಸಾಯುತ್ತಿರುವ ಎಲ್ಲರನ್ನು ಕಾಪಾಡಲಿ ಎಂದು ವ್ಯಂಗ್ಯವಾಡಿದರು. ಈ ದೇಶವನ್ನು ಹಾಗೂ ಆ ಪ್ರಧಾನ ಮಂತ್ರಿಯನ್ನು ಶ್ರೀರಾಮನೆ ಕಾಪಾಡಲಿ ಎಂದು ತಿಳಿಸಿದರು
Laxmi News 24×7