ಬಿಜೆಪಿಯ ಕೆಲವರು ವಿಜಯೇಂದ್ರ ಮೊಣಕಾಲಿಗೆ ನಮಸ್ಕಾರ ಮಾಡುತ್ತಾರೆ. ಸಿಎಂ ಮಗನ ಮುಂದೆ ಕೈ ಒಡ್ಡಿ ನಿಲ್ಲುತ್ತಾರೆ. ಅವರೇನು ಗ್ರಾ. ಪಂ ಸದಸ್ಯನೂ ಆಗಿಲ್ಲ. ಅಷ್ಟೊಂದು ಕೆಳಮಟ್ಟದಲ್ಲಿ ಕೆಲವರು ಇದ್ದಾರೆ ಎಂದು ಸಾಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ವಿಶ್ವಾಸರ್ಹ ರಾಷ್ಟನಾಯಕರನ್ನು ರಾಜ್ಯಕ್ಕೆ ಕಳುಹಿಸಿ. ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಪಡೆಯಿರಿ. ಮೊನ್ನೆ ಅರುಣ್ ಸಿಂಗ್ ಮಾಡಿದ್ದ ನಾಟಕ ಇದೆ ದೆಹಲಿಯಲ್ಲೇ ನಾಯಕತ್ವ ಬದಲಾವಣೆ ಇಲ್ಲ. ಈ ರೀತಿ ಅಲ್ಲೇ ಹೇಳಿದ ಮೇಲೆ ಇಲ್ಕಿಗೆ ಏಕೆ ಬಂದರು. ಸತ್ಯ ಒಂದಲ್ಲ ಒಂದು ದಿನ ಬೆಳಕಿಗೆ ಬರುತ್ತದೆ. ಎಲ್ಲರೂ ಕಾಯಿರಿ ಎಂದಿದ್ದಾರೆ
ಅಲ್ಲದೇ ನಾನೇ ಹಿಂದೆನೇ ಮುಖ್ಯಮಂತ್ರಿಯಾಗಬೇಕಿತ್ತು. ನಾನೇ ಕೆಲ ಅವಕಾಶಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಸದಾನಂದಗೌಡ ಜಗದೀಶ್ ಶೆಟ್ಟರ್‌ಗಿಂತ ನಾನು ಸೀನಿಯರ್. ಯಡಿಯೂರಪ್ಪ ಮಂತ್ರಿನೂ ಆಗಿರಲಿಲ್ಲ ಆಗಲೇ ನಾನೇ ಕೇಂದ್ರ ಮಂತ್ರಿಯಾಗಿದ್ದೆ. ರಾಜಕೀಯ ಅಂತ್ಯವಾದರೂ ಪರವಾಗಿಲ್ಲ. ಭ್ರಷ್ಟಾಚಾರ ಕುಟುಂಬಶಾಯಿ ವಿರುದ್ದ ನನ್ನ ಹೋರಾಟ ನಿಲ್ಲಿಸಲ್ಲ ಎಂದಿದ್ದಾರೆ.
Laxmi News 24×7