Breaking News

ಲಸಿಕೆ ಪಡೆಯಲು ಜನರ ತಳ್ಳಾಟ ನೂಕಾಟ

Spread the love

ಕಾರವಾರ: ರಾಜ್ಯಾದ್ಯಂತ ಕೊರೊನಾ ಲಸಿಕೆಯ ಅಭಾವ ಮಿತಿಮೀರಿದ್ದು ಗಡಿ ಜಿಲ್ಲೆ ಉತ್ತರ ಕನ್ನಡವನ್ನೂ ಬಿಟ್ಟಿಲ್ಲ. 15 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಇದುವರೆಗೆ 3,81000 ಜನ ಮೊದಲ ಹಂತದ ಲಸಿಕೆ ಪಡೆದಿದ್ದಾರೆ. 77000 ಜನ ಎರಡನೇ ಹಂತದ ಲಸಿಕೆ ಸಹ ನೀಡಲಾಗಿದೆ. ಆದರೆ ಇದೀಗ ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಪ್ರಮಾಣದಲ್ಲಿ ಲಸಿಕೆ ಬರುತ್ತಿಲ್ಲ.
ಕಳೆದ ಮೂರು ದಿನದಿಂದ ಜಿಲ್ಲೆಯಲ್ಲಿ ಲಸಿಕೆ ಅಭಾವ ಸಹ ಆಗಿದ್ದು, ಜಿಲ್ಲಾಡಳಿತದಿಂದ ನಿಗದಿ ಮಾಡಿದವರನ್ನು ಹೊರತುಪಡಿಸಿ ಉಳಿದವರಗೆ ನೀಡುತ್ತಿಲ್ಲ. ಆದರೆ ನಿಗದಿ ಮಾಡಿದ ಜನರಿಗೂ ಇದೀಗ ಲಸಿಕೆ ಅಭಾವದ ಬಿಸಿ ತಟ್ಟಿದ್ದು ಇಂದು ಕಾರವಾರದಲ್ಲಿ ವ್ಯಾಕ್ಸಿನ್ ಖಾಲಿಯಾಗಿ ಜನ ವ್ಯಾಕ್ಸಿನ್ ಗಾಗಿ ತಳ್ಳಾಟ ನೂಕಾಟ ನಡೆಸಿದರು. ಇಂದು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡುತಿದ್ದು, ಹೆಚ್ಚಿನ ಜನ ವ್ಯಾಕ್ಸಿನ್ ತೆಗೆದುಕೊಳ್ಳಲು ಆಗಮಿಸಿದ್ದರು. ಆದರೆ ಲಸಿಕಾ ಕೇಂದ್ರದಲ್ಲಿ 150 ಡೋಸ್ ಮಾತ್ರ ಇದ್ದು ಐನೂರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಇದರಿಂದಾಗಿ ನೂಕು ನುಗ್ಗಾಟ ನಡೆದಿದ್ದು ಜನ ಲಸಿಕಾ ಕೇಂದ್ರದಲ್ಲಿ ಬಾಗಿಲು ಮುರಿದು ಒಳಬರಲು ಪ್ರಯತ್ನಿಸಿದರು.
ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಿ ಸಮಾಧಾನಪಡಿಸಿ ಲಸಿಕೆಯ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ನಂತರ ಜನರು ಲಸಿಕಾ ಕೇಂದ್ರದಿಂದ ತೆರಳಿದರು. ಸದ್ಯ ಜಿಲ್ಲೆಗೆ ಬರಬೇಕಾದ ಲಸಿಕೆ ಕಳೆದ ಎರಡು ದಿನದಿಂದ ಜಿಲ್ಲೆಗೆ ಆಗಮಿಸಿಲ್ಲ. ಹೀಗಾಗಿ ಬಹುತೇಕ ಲಸಿಕಾ ಕೇಂದ್ರಗಳು ಮುಚ್ಚಿವೆ.


Spread the love

About Laxminews 24x7

Check Also

ಅರಣ್ಯಾಧಿಕಾರಿಗಳ ದಾಳಿ – ಫ್ರಿಡ್ಜ್‌ಲ್ಲಿ 21 ಕೆಜಿ ಜಿಂಕೆ ಮಾಂಸ ಪತ್ತೆ

Spread the loveಕಾರವಾರ: ಕಾಡು ಪ್ರಾಣಿಗಳ ಹತ್ಯೆ ಶಂಕೆಯ ಮೇರೆಗೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಭಟ್ಕಳ (Bhatkal) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ