Breaking News

ಸಾರ್ವಜನಿಕರು ಎಚ್ಚರದಿಂದ ಇರುವಂತೆ ಬೆಳಗಾವಿ ಡಿಸಿಪಿ ವಿಕ್ರಂ ಆಮಟೆ

Spread the love

ಬೆಳಗಾವಿ: ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಿದ್ದು, ಸಾರ್ವಜನಿಕರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿರುವ ಪೊಲೀಸ್ ಉಪ ಆಯುಕ್ತ ವಿಕ್ರಂ ಆಮಟೆ, ಒಂದುಗಂಟೆಯೊಳಗೆ ದೂರು ನೀಡುವಂತೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಂ ಆಮಟೆ, 2020 ಹಾಗೂ 2021ರಲ್ಲಿ ಒಟ್ಟು 65 ಲಕ್ಷ ರೂ ಹಣ ಸೈಬರ್ ವಂಚನೆಯಾಗಿದ್ದು, 29 ಲಕ್ಷ 13 ಸಾವಿರ ರೂಪಾಯಿಯನ್ನು ಕಾರ್ಯಾಚರಣೆ ನಡೆಸಿ ವಂಚನೆಗೊಳಗಾದವರ ಖಾತೆಗೆ ಮರು ಜಮಾವಣೆ ಮಾಡಲಾಗಿದೆ ಎಂದರು.

ನಗರ ವ್ಯಾಪ್ತಿಯಲ್ಲಿ ನೊಂದವರು ಬೆಳಗಾವಿ ಸೈಬರ್ ಪೊಲೀಸರ ಠಾಣೆ 9480804084, ಇಆರ್ ಎಸ್ ಎಸ್ ಕಂಟ್ರೋಲ್ ರೂಮ್ 112 ಹಾಗೂ ದೂರವಾಣಿ 0831-2405233 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ವಂಚನೆಗೊಳಗಾದವರು ಒಂದುಗಂಟೆಯೊಳಗಾಗಿ ದೂರು ನೀಡಿದರೆ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಸೈಬರ್ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಗ್ಯಾರಂಟಿಗಳ ಬಜೆಟ್ ಇಡೀ ರಾಜ್ಯದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಲಿದೆ

Spread the loveಬೆಳಗಾವಿ: ಶಿಸ್ತುಬದ್ಧ ತೆರಿಗೆ ಪಾವತಿ ಸೇರಿ ದೇಶದ ಕಾನೂನು ಪಾಲನೆಯಲ್ಲಿ ಯೋಜನಾ ಬದ್ಧ ಜೀವನ ವ್ಯವಸ್ಥೆ ಹೊಂದಿರುವ ಕರ್ನಾಟಕಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ