ಹುಬ್ಬಳ್ಳಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಆತನ ಚಿಕ್ಕಪ್ಪನ ಮಗನೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಇಲ್ಲಿನ ಗಾರ್ಡನ್ ಪೇಟೆಯಲ್ಲಿ ಇಂದು ರಾತ್ರಿ ( ಜುಲೈ.2) ನಡೆದಿದೆ.
ಇಲ್ಲಿನ ಗಾರ್ಡನ್ ಪೇಟೆಯಲ್ಲಿ ಕೌಟುಂಬಿಕ ವಿಷಯವಾಗಿ ಚಿಕ್ಕಪ್ಪನ ಮಗನು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಲಾಗಿದೆ.
ಸಾದೀಕ್ ಬೆಕ್ಕಿನಬಾಯಿ ಎಂಬುವನಿಗೆ ಅವರ ಚಿಕ್ಕಪ್ಪ ನ ಮಗ ಸೈಯದ್ ಬೆಕ್ಕಿನಬಾಯಿ ಮಚ್ಚಿನಿಂದ ತಲೆಗೆ ಹಾಗೂ ದೇಹದ ಮೇಲೆ ಬಲವಾಗಿ ಹಲ್ಲೆ ಮಾಡಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಘಂಟಿಕೇರಿ ಠಾಣೆ ಇನ್ಸಪೆಕ್ಟರ್ ತೆರಳಿ ಪರಿಶೀಲಿಸುತ್ತಿದ್ದಾರೆ.