Breaking News

18 ಮೀ. ಆಳಕ್ಕೆ ಕುಸಿದ ಮಣ್ಣು; ತಪ್ಪಿದ ಅವಘಡ

Spread the love

ಹುಬ್ಬಳ್ಳಿ: ಕೋರ್ಟ್‌ ವೃತ್ತದ ಸಾಯಿ ಮಂದಿರದ ಎದುರು ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ನಿರ್ಮಾಣ ಹಂತದ ತಡೆಗೋಡೆ ಮೇಲೆ ಗುರುವಾರ ರಾತ್ರಿ 18 ಮೀಟರ್‌ ಎತ್ತರದಿಂದ ಮಣ್ಣು ಕುಸಿದಿದ್ದು, ಅವಘಡವೊಂದು ತಪ್ಪಿದಂತಾಗಿದೆ.

ಮಣ್ಣು ಕುಸಿಯದಂತೆ 50 ಮೀಟರ್‌ ಅಗಲ ಪ್ಲಾಸ್ಟರ್‌ ಮಾಡಲಾಗಿತ್ತು. 30 ಮೀಟರ್‌ ಅಗಲದ ಪ್ಲಾಸ್ಟರ್‌ ಸಮೇತ ಮಣ್ಣು ತಡೆಗೋಡೆ ಮೇಲೆ ಬಿದ್ದಿದೆ. ಮಧ್ಯರಾತ್ರಿ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಶುಕ್ರವಾರ ಬೆಳಿಗ್ಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಎಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

₹ 50 ಕೋಟಿ ವೆಚ್ಚದ ಬೃಹತ್‌ ಕಾಮಗಾರಿ ಇದಾಗಿದ್ದು, ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಎಂಟು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 18 ಮೀಟರ್‌ ಆಳ ತಗ್ಗು ತೋಡಲಾಗಿದೆ. ಲಾಕ್‌ಡೌನ್‌ ಸಡಿಲಿಕೆಯಾದ ಹಿನ್ನೆಲೆಯಲ್ಲಿ ವಾರದಿಂದ ಈಚೆಗೆ ಕಾಮಗಾರಿ ಚುರುಕು ಪಡೆದುಕೊಂಡಿತ್ತು. ಸುರೇಶ ಎಂಟರ್‌ಪ್ರೈವೇಸಿಸ್ ಲಿಮಿಟೆಡ್‌ ಕಾಮಗಾರಿ ನಿರ್ವಹಿಸುತ್ತಿದೆ.

‘ಈ ಹಿಂದೆಯೂ ಎರಡು ಬಾರಿ ಮಣ್ಣು ಕುಸಿದು ಬಿದಿದ್ದು, ಇದೀಗ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಸುತ್ತಲೂ ಬೃಹತ್‌ ಕಟ್ಟಡಗಳಿರುವುದರಿಂದ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಗುರುವಾರ ರಾತ್ರಿ 2ಗಂಟೆ ವೇಳೆ ಮಣ್ಣು ಕುಸಿದಿದೆ. ಹಗಲಿನ ವೇಳೆ ಆಗಿದ್ದರೆ, ಕಾರ್ಮಿಕರ ಪ್ರಾಣಕ್ಕೆ ಅಪಾಯ ಎದುರಾಗುತ್ತಿತ್ತು. ಯಾವ ಸಂದರ್ಭದಲ್ಲಿ ಏನಾಗುತ್ತದೆಯೋ ತಿಳಿಯುತ್ತಿಲ್ಲ. ಈ ಹಿಂದೆಯೂ ಎರಡು ಬಾರಿ ತಡೆಗೋಡೆ ಕುಸಿದು ಬಿದ್ದಿತ್ತು’ ಎಂದು ಅಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ತಿಳಿಸಿದರು.

‘ಮಳೆಯಿಂದ ಮಣ್ಣು ಕುಸಿತ’: ’13 ಮೀಟರ್‌ ಎತ್ತರದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 4.5 ಮೀ. ಮುಕ್ತಾಯವಾಗಿತ್ತು. ಸಡಿಲ ಮಣ್ಣು ಹಾಗೂ ಮಳೆಯಿಂದಾಗಿ ಧರೆ ಕುಸಿದು ತಡೆಗೋಡೆ ಮೇಲೆ ಬಿದ್ದಿದೆ. ತಿಂಗಳೊಳಗೆ ತಡೆಗೋಡೆ ಹಾಗೂ ಮೂರು ಅಂತಸ್ತಿನ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ’ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ಹೇಳಿದರು.


Spread the love

About Laxminews 24x7

Check Also

ಮಹಾದೇವಿ ಅವರ ಮೃತದೇಹ ಆಂಬ್ಯುಲೆನ್ಸ್​ ಮೂಲಕ ನೂಲ್ವಿ ಗ್ರಾಮಕ್ಕೆ ಆಗಮಸಿದ್ದು, ತಂದೆ, ಸಹೋದರರು ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Spread the loveಹುಬ್ಬಳ್ಳಿ: ಪ್ರಯಾಗ್‌ರಾಜ್​ನಲ್ಲಿ ಕಾಲ್ತುಳಿತಕ್ಕೊಳಗಾಗಿ ಸಾವನ್ನಪ್ಪಿದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಮಹಾದೇವಿ ಹನುಮಂತಪ್ಪ ಬಾವನೂರ್ (ಸಂಕನಗೌಡರ್) ಮೃತದೇಹಕ್ಕೆ ಗುರುವಾರ ತಡರಾತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ