Breaking News

SDA ಪರೀಕ್ಷೆ’ಗೆ ಕೆಪಿಎಸ್ಸಿಯಿಂದ ಪರಿಷ್ಕೃತ ದಿನಾಂಕ ಪ್ರಕಟ : ಸೆ.18, 19ಕ್ಕೆ ಪರೀಕ್ಷೆ ನಿಗದಿ

Spread the love

ಬೆಂಗಳೂರು : ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮೂಲಕ ನಡೆಸಲಾಗುತ್ತಿದ್ದಂತ ಎಸ್ ಡಿ ಎ ಪರೀಕ್ಷೆಯನ್ನು ಕೊರೋನಾ ಕಾರಣದಿಂದಾಗಿ ಮುಂದೂಡಲಾಗಿತ್ತು. ಇಂತಹ ಪರೀಕ್ಷೆಯನ್ನು ನಡೆಸಲು ಇದೀಗ ಕೆಪಿಎಸ್ಸಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಸೆಪ್ಟೆಂಬರ್ 18 ಹಾಗೂ 19ಕ್ಕೆ ಪರೀಕ್ಷಾ ದಿನಾಂಕವನ್ನು ನಿಗದಿ ಪಡಿಸಿದೆ.

ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದಿನಾಂಕ 29-02-2020ರ ಅಧಿಸೂಚನೆಯಲ್ಲಿ 2019ನೇ ಸಾಲಿನ ರಾಜ್ಯದ ವಿವಿಧ ಇಲಾಖೆಯಲ್ಲಿನ ಉಳಿಕ ಮೂಲ ವೃಂದದ ಹಾಗೂ ಹೈದರಾಬಾದ್ ಕರ್ನಾಟಕ ವೃಂದದ ಕಿರಿಯ ಸಹಾಯಕರ/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಆಯೋಗವು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿ ಈ ಕೆಳಕಂಡಂತೆ ಪ್ರಕಟಿಸಿದೆ ಎಂಬುದಾಗಿ ತಿಳಿಸಿದ್ದಾರೆ.

ಹೀಗಿದೆ ‘ಎಸ್ ಡಿ ಎ ಪರೀಕ್ಷೆ’ಯ ಪರಿಷ್ಕೃತ ವೇಳಾಪಟ್ಟಿ

  • ದಿನಾಂಕ 18-09-2021ರ ಶನಿವಾರ ಬೆಳಿಗ್ಗೆ 10 ರಿಂದ 11.30ರವರೆಗೆ – ಪತ್ರಿಕೆ -1 : ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ
  • ದಿನಾಂಕ 19-09-2021ರ ಭಾನುವಾರ ಬೆಳಿಗ್ಗೆ 10 ರಿಂದ 11.30ರವರೆಗೆ ಪತ್ರಿಕೆ-3 – ಸಾಮಾನ್ಯ ಜ್ಞಾನ. ಪತ್ರಿಕೆ -2 ಮಧ್ಯಾಹ್ನ 2 ರಿಂದ 3.30ರವರೆಗೆ – ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್.

 

 


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ