Breaking News

ಕೆಂಪೇಗೌಡರು ಒಂದು ಜಾತಿಗೆ ಸೀಮಿತವಲ್ಲ

Spread the love

ವಿಜಯಪುರ: ನಾಡಪ್ರಭು ಕೆಂಪೇ ಗೌಡರು ಒಂದು ಜಾತಿಗೆ ಸೀಮಿತರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು.

ಹೊಸಕೋಟೆ ನಗರದ ಮಿನಿವಿಧಾನಸೌಧ ಮುಂಭಾಗದಲ್ಲಿಒಕ್ಕಲಿಗರ ಸಂಘದಿಂದ ನಡೆದ ನಾಡ ಪ್ರಭುಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಜಯಂತಿ ಯನ್ನು ರಾಜ್ಯದಲ್ಲಿ ಸರಳವಾಗಿ ಸಂಭ್ರಮದಿಂದ ಆಚರಣೆ ಮಾಡಲಾ ಗುತ್ತಿದೆ. 39 ವರ್ಷಗಳ ಕಾಲ ಬೆಂಗ ಳೂರುನಗರವನ್ನುಕಟ್ಟಿ ರಾಜಕೀಯ, ಆರ್ಥಿಕ, ಸ್ವಾವಲಂಬಿ ಶಕ್ತಿಯನ್ನು ತುಂಬಿ ಬೆಂಗಳೂರು ನಗರವನ್ನು ವಿಶ್ವ ವಿಖ್ಯಾತಿಗೊಳಿಸಿದ ಕೀರ್ತಿ ಕೆಂಪೇ ಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.

ವೇಗವಾಗಿ ಬೆಳೆದಿದೆ ಬೆಂಗಳೂರು: ಬೆಂಗಳೂರಿಗೆ ವಿಶೇಷವಾದ ಆದ್ಯತೆ ನೀಡಿ, ನಾಲ್ಕು ದಿಕ್ಕುಗಳಲ್ಲಿ ಗೋಪುರಗಳನ್ನು ಕಟ್ಟಿದ್ದು, ಇಂದು ಅದನ್ನು ಮೀರಿ ಬೆಂಗಳೂರು ಅತಿವೇಗವಾಗಿ ಬೆಳೆದಿದೆ. ಅಂತಹ ನಾಯಕರ ಜನ್ಮ ದಿನಾಚರಣೆ ನಮ್ಮ ಭಾಗ್ಯ. ಈ ಪ್ರತಿಮೆ ನಾನು ಶಾಸಕನಾಗಿದ್ದಾಗ ನಮ್ಮ ಅವಧಿಯಲ್ಲಿ ನಿರ್ಮಾಣಗೊಂಡಿದ್ದು, ನಮಗೆ ಸಂತೋಷ ತಂದಿದೆ. ನಾಡಪ್ರಭು ಕೆಂಪೇಗೌಡರು ಒಕ್ಕಲಿಗರಾಗಿ ಹುಟ್ಟಿದ್ದು, ಯಾವುದೇ ಒಂದು ಜಾತಿಗೆಸೀಮಿತರಾಗಿಲ್ಲ. ಅಂತಹ ವ್ಯಕ್ತಿತ್ವ ಅವರದ್ದು. ಸಮಾನತೆ ಸಹ ಬಾಳ್ವೆ ಅವರ ಕನಸಾಗಿತ್ತು. ಅಂತಹ ಮಹಾನ್‌ನಾಯಕ ಕೆಂಪೇಗೌಡರು ಈ ನಾಡಲ್ಲಿಮತ್ತೆ ಹುಟ್ಟಿ ಬರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜು ಹೆಗ್ಗಡೆ, ಬಿ.ಎಂ.ಆರ್‌.ಡಿ ಅಧ್ಯಕ್ಷ ಸಿ.ನಾಗರಾಜ್,ಕೆ.ಸತೀಶ್‌, ಸೋಣ್ಣೇಗೌಡ, ಶಂಕರೇಗೌಡ, ಲಕ್ಷ್ಮಣ್‌ ಗೌಡ, ನಗರಸಭೆ ಅಧ್ಯಕ್ಷ ಅರುಣ್‌ ಕುಮಾರ್‌ ಮತ್ತು ಮುಖಂಡರು ಹಾಜರಿದ್ದರು.


Spread the love

About Laxminews 24x7

Check Also

ಬುಧವಾರವೂ ಜಿಲ್ಲೆಯಎಲ್ಲ ತಾಲ್ಲೂಕುಗಳ ಶಾಲೆಗಳಿಗೆರಜೆ ಘೋಷಣೆ: ಜಿಲ್ಲಾಧಿಕಾರಿ

Spread the love ಬುಧವಾರವೂ ಜಿಲ್ಲೆಯಎಲ್ಲ ತಾಲ್ಲೂಕುಗಳ ಶಾಲೆಗಳಿಗೆರಜೆ ಘೋಷಣೆ ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿಮಳೆ ಸುರಿಯುತ್ತಿದ್ದು ಜಿಲ್ಲೆಯ ಜನಜೀವನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ