ಬೆಳಗಾವಿ ಮಹಾನಗರ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಹಾಗೂ ಯುವ ಮುಖಂಡರಾದ ಸತೀಶ ಕಾಕತಿಕರ ಅವರನ್ನು ರಾಜ್ಯ ಸರ್ಕಾರ ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಆರಾಧನಾ ಸಮಿತಿಗೆ ಸರ್ಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ (nominate) ಮಾಡಿ ಆದೇಶ ಜಾರಿಗೊಳಿಸಿದೆ.
ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಮುಜರಾಯಿ) ಇವರ ಆದೇಶ ಅನುಸಾರ ಕಳೆದ ವಾರದಲ್ಲಿ ಬೆಳಗಾವಿ ತಹಶಿಲ್ದಾರ ಕಚೇರಿಯಿಂದ ಸತೀಶ ಕಾಕತಿಕರ ಅವರಿಗೆ ಆದೇಶ ಪತ್ರವನ್ನು ಅಂಚೆ ಇಲಾಖೆ ಮೂಲಕ ತಲುಪಿಸಲಾಗಿದ್ದು,ಸ್ಥಳೀಯ ಶಾಸಕರಾದ ಅನಿಲ ಬೆನಕೆ ಅವರ ಶಿಫಾರಸ್ಸು ಮೂಲಕ ಸತೀಶ ಅವರನ್ನು ಆರಾಧನಾ ಸಮಿತಿಗೆ ಸರ್ಕಾರೇತರ ಸದಸ್ಯರನ್ನಾಗಿ (nominate) ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸತೀಶ ಕಾಕತಿಕರ ಅವರು ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ST ಮೊರ್ಚಾ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿದ್ದನ್ನು ಗಮನಿಸಿದ ಬಿಜೆಪಿ ಪಕ್ಷ ಸತೀಶ ಅವರನ್ನು ಅವರ ಹುದ್ದೆಯಿಂದ ಬಡ್ತಿ ನೀಡಿ ಬೆಳಗಾವಿ ಮಹಾನಗರ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಶ್ರಮ ವಹಿಸಿ ನಿಸ್ವಾರ್ಥದಿಂದ ದುಡಿದಿದ್ದಕ್ಕೆ ಶಾಸಕ ಅನೀಲ ಬೆನಕೆ ಅವರು ನನ್ನನ್ನು ಆರಾಧನಾ ಸಮಿತಿಗೆ ಸರ್ಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ.ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ.ನನ್ನನ್ನು ನಾನು ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳುತ್ತೆನೆಂದು ಸತೀಶ ಕಾಕತೀಕರ ಲಕ್ಷ್ಮೀ ನ್ಯೂಸ್ ನೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.