ಬೆಂಗಳೂರು : ಬೆಂಗಳೂರಿನಲ್ಲಿ ಹಂತ ಹಂತವಾಗಿ ಅನ್ ಲಾಕ್ ಘೋಷಣೆ ಬೆನ್ನಲ್ಲೇ ಜನರು ಕೋವಿಡ್ ನಿಯಮಾವಳಿಯನ್ನ ಗಾಳಿಗೆ ತೂರಿದ್ದಾರೆ. ರಾಜಧಾನಿಯ ಮಾರುಕಟ್ಟೆಗಳಲ್ಲಿ ಕೊರೊನಾ ಭಯವಿಲ್ಲದೆ ಜನರು ಖರೀದಿಯಲ್ಲೇ ಫುಲ್ ಬ್ಯುಸಿ ಆಗಿದ್ರು. ವೀಕೆಂಡ್ ಕರ್ಫ್ಯೂ ಇದ್ರೂ ಕೂಡ ಶಿವಾಜಿನಗರದಲ್ಲಿ ಜನಜಂಗುಳಿಯೇ ಸೇರಿತ್ತು.
ಇಂದು ಭಾನುವಾರವಾದ ಹಿನ್ನೆಲೆಯಲ್ಲಿ ಮಟನ್, ಚಿಕ್ಕನ್ ಖರೀದಿಗೆ ಜನರು ಮುಗಿಬಿದ್ರು. ಸಣ್ಣ ಪುಟ್ಟ ರಸ್ತೆಗಳಲ್ಲೂ ಜನರು ತುಂಬಿದ್ರು. ಬೈಕ್, ಆಟೋ ಸಂಚಾರಕ್ಕೆ ಬ್ರೇಕ್ ಅನ್ನೋದೆ ಇರಲಿಲ್ಲ.. ಸಾಮಾಜಿಕ ಅಂತರ ಮರೆತು, ಮಾಸ್ಕ್ ಹಾಕದೇ ಜನರು ಬೇಕಾಬಿಟ್ಟಿಯಾಗಿ ಓಡಾಡಿದ್ರು. ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಆಗಿ ವಾಹನ ಸವಾರರು ಹೈರಾಣಾದ್ರು.