Breaking News

ತಮ್ಮನ ಮದ್ವೆಗಾಗಿ 2 ದಿನ ರಜೆ ತೆಗೆದುಕೊಳ್ಳಲಿಕ್ಕೂ ಪತ್ರ ಬರೆದು ಕೋರಿಕೊಂಡ ಗ್ರಾಮ ಪಂಚಾಯತ್ ಸದಸ್ಯ!

Spread the love

ದಾವಣಗೆರೆ: ಜನಪ್ರತಿನಿಧಿಗಳೆಂದರೆ ಸಾಮಾನ್ಯವಾಗಿ ಭೇಟಿಗೆ ಸಿಗುವುದೇ ಅಪರೂಪ. ಇನ್ನು ಏನಾದರೂ ಕೆಲಸ ಆಗಬೇಕೆಂದರೆ ಗೆದ್ದ ಮೇಲೆ ಅವರು ಪ್ರಜೆಗಳ ಪಾಲಿಗೆ ಗಗನಕುಸುಮ. ಹೀಗಿರುವಾಗ ಇಲ್ಲೊಬ್ಬ ಜನಪ್ರತಿನಿಧಿ ತನ್ನ ತಮ್ಮನ ಮದುವೆಗಾಗಿ ಎರಡು ದಿನ ರಜೆ ತೆಗೆದುಕೊಳ್ಳಲಿಕ್ಕೂ ಅರ್ಜಿ ಹಾಕಿ ಮನವಿ ಮಾಡಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮಪಂಚಾಯಿತಿಯ ಅರೇಹಳ್ಳಿ ಗ್ರಾಮದ ವಾರ್ಡ್-04ರ ಸದಸ್ಯ ಚೇತನ್​ ಕುಮಾರ್ ಅರೇಹಳ್ಳಿ ಹೀಗೆ ರಜೆ ಅರ್ಜಿ ಸಲ್ಲಿಸಿ ವಿನಂತಿಸಿಕೊಳ್ಳುವ ಮೂಲಕ ಹಲವರ ಗಮನ ಸೆಳೆದಿದ್ದಾರೆ. ಜೂನ್​ 28 ಮತ್ತು 29ರಂದು ತಮ್ಮನ ಮದುವೆ ಇರುವುದರಿಂದ 2 ದಿನಗಳ ರಜೆ ನೀಡಬೇಕು ಎಂದು ಕೋರಿ ಅವರು ಕಾರಿಗನೂರು ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗೆ ಅರ್ಜಿ ಸಲ್ಲಿಸಿದ್ದಾರೆ. ಮಾತ್ರವಲ್ಲ ಈ ಎರಡು ದಿನದಲ್ಲಿ ಯಾವುದೇ ಸಾಂವಿಧಾನಿಕ ಸಭೆ, ಸಾಮಾನ್ಯ ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗುವುದಿಲ್ಲ ಎಂಬುದಾಗಿ ಅನುಮತಿಯನ್ನೂ ಕೋರಿದ್ದಾರೆ. ಚೇತನ್​ ಕುಮಾರ್ ಅವರ ಈ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೇತನ್ ಕುಮಾರ್ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರು ಸಂಸ್ಥಾಪನೆ ಮಾಡಿರುವ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯಿತಿಯಲ್ಲಿ ಆರಿಸಿ ಬಂದಿದ್ದರು. ಇವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ ಉಪೇಂದ್ರ ಅವರು ಅರೇಹಳ್ಳಿಗೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಉಪೇಂದ್ರ ನಿರ್ದೇಶನದ ‘ಸೂಪರ್’ ಸಿನಿಮಾದಲ್ಲಿ ಇರುವಂತೆ ಅರೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಆಯಾ ಮನೆಯವರಿಂದಲೇ ಚರಂಡಿ ಸ್ವಚ್ಛಗೊಳಿಸಿ, ಅದಕ್ಕೆಂದು ಬಿಡುಗಡೆಯಾಗಿದ್ದ ಹಣವನ್ನು ಜನರಿಗೇ ಹಂಚಿದ್ದ ಚೇತನ್​, ಆ ಮೂಲಕವೂ ಕೆಲವು ದಿನಗಳ ಹಿಂದೆ ಹಲವರ ಗಮನ ಸೆಳೆದಿದ್ದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ