ಬೆಳ್ತಂಗಡಿ: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡು ಸ್ಥಳದಲ್ಲಿ ಕೆಲಕಾಲ ಸಾರ್ವಜನಿಕರು ಹಾಗೂ ಆಸ್ಪತ್ರೆ ಮಂದಿಯನ್ನು ಆತಂಕಕ್ಕೀಡು ಮಾಡಿದ ಘಟನೆ ಗುರುವಾರ ನಡೆದಿದೆ.
ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ಕಪಾಟಿನಲ್ಲಿ ಹೆಬ್ಬಾವು ಅವಿತುಕೊಂಡಿದ್ದು, ಕಪಾಟು ಬಾಗಿಲು ತೆರೆಯುವ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತವರಣ ನಿರ್ಮಾಣವಾಯಿತು. ಸಿಬ್ಬಂದಿ, ಸಾರ್ವಜನಿಕರು ಆತಂಕಗೊಂಡರು. ಕೂಡಲೇ ಹಾವು ಸೆರೆ ಹಿಡಿಯುವ ಸ್ನೇಕ್ ಅಶೋಕ್ ಎಂಬವರನ್ನು ಸಂಪರ್ಕಿಸಲಾಯಿತು. ಬಳಿಕ ಅವರು ಬಂದು ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Laxmi News 24×7