Breaking News

ನಾಗರಹಾವು ಕಚ್ಚಿದ್ದರಿಂದ ಮೃತಪಟ್ಟ ಉರಗ ತಜ್ಞ

Spread the love

ಬಾಗಲಕೋಟೆ: ಹಾವುಗಳನ್ನ ಹಿಡಿಯುವಲ್ಲಿ ಪರಿಣಿತಿ ಪಡೆದಿದ್ದ ಬಾದಾಮಿ ತಾಲೂಕಿನ ಕಳಸಕೊಪ್ಪ ಗ್ರಾಮದ ಉರಗ ತಜ್ಞ ಸದಾಶಿವ ಕರಣಿ (30) ಅವರಿಗೆ ನಾಗರಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದಾರೆ.

ಸದಾಶಿವ ಕರಣಿ ಸ್ವಯಂ ಆಸಕ್ತಿಯಿಂದ ಹಾವು ಹಿಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಹೀಗಾಗಿ ಬಾದಾಮಿ ಪಟ್ಟಣ ಸೇರಿದಂತೆ ಕಳಸಕೊಪ್ಪದ ಸುತ್ತಲಿನ ಹಳ್ಳಿಗಳಲ್ಲಿ ಹಾವು ಕಂಡರೆ ಹಿಡಿಯಲು ಜನರು ಸದಾಶಿವ ಅವರಿಗೆ ಕರೆ ಮಾಡುತ್ತಿದ್ದರು. ಹಿಡಿದ ಹಾವನ್ನು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಿದ್ದರು.

ಕಳಸಕೊಪ್ಪದ ಹೊಲವೊಂದರಲ್ಲಿ ಬುಧವಾರ ಮಧ್ಯಾಹ್ನ ನಾಗರಹಾವು ಹಿಡಿದಿದ್ದ ಸದಾಶಿವ ನಂತರ ಅದೇ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದರು. ಅದಕ್ಕೆ ಮನೆಯಲ್ಲಿ ತಾನೇ ಗಿಡಮೂಲಿಕೆಯಿಂದ ಔಷಧಿ ತಯಾರಿಸಿ ಸೇವಿಸಿದ್ದರು. ಆದರೆ ತಡರಾತ್ರಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ