Breaking News

ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಸಂಬಂದ ಟಿಕ್‌ ಟಾಕ್‌ ನಲ್ಲಿ ಬಹಿರಂಗ

Spread the love

ಬೆಂಗಳೂರು: ಯಾವುದೋ ವಯಸ್ಸಿನವರ ಜತೆ ಇನ್ನಾವುದೋ ವಯಸ್ಸಿನವರು ಅಕ್ರಮ ಸಂಬಂಧ ಇಟ್ಟುಕೊಳ್ಳುವುದನ್ನು ನೋಡಿರುತ್ತೀರಿ. ಆದರೆ ಈ ಕಥೆ ಕೇಳಿದರೆ ಒಬ್ಬ ವ್ಯಕ್ತಿಯ ಬಗ್ಗೆ ಪಾಪ ಎನಿಸುತ್ತದೆ. ಪ್ರೀತಿಯಿಂದ ಸಾಕಿದ್ದ ಮಗ ಸಂಬಂಧದಲ್ಲಿ ತನಗೆ ಚಿಕ್ಕಪ್ಪ ಆಗಬೇಕು ಎನ್ನುವ ವಿಚಾರ ತಿಳಿದು ನೋವುಂಡಿರುವ ವ್ಯಕ್ತಿಯಯೊಬ್ಬನ ಕಥೆಯಿದು.

ವ್ಯಕ್ತಿಯೊಬ್ಬ ಟಿಕ್​ಟಾಕ್​ನಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾನೆ. ಹಲವಾರು ವರ್ಷಗಳಿಂದ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇಬ್ಬರೂ ಜತೆಯಲ್ಲೇ ಬದುಕುತ್ತಿದ್ದೇವೆ. ನಮಗೆ ಮುದ್ದಾಗ ಮಗನೂ ಇದ್ದಾನೆ. ಸಾಕಷ್ಟು ವರ್ಷಗಳಿಂದ ನಾವು ನನ್ನ ಅಜ್ಜನ ಮನೆಯಲ್ಲೇ ಬದುಕುತ್ತಿದ್ದೇವೆ. ಆದರೆ ಇತ್ತೀಚೆಗೆ ನನಗೊಂದು ಸತ್ಯ ಗೊತ್ತಾಗಿ ನಾನು ಸಂಪೂರ್ಣವಾಗಿ ಕುಗ್ಗಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಅಂದು ನನ್ನ ಗರ್ಲ್​ಫ್ರೆಂಡ್ ಸ್ನಾನಕ್ಕೆ ಹೋಗಿದ್ದಳು. ಆಗ ನಾನು ಯುಟ್ಯೂಬ್​ನಲ್ಲಿ ಹಾಡು ಹಾಕೋಣವೆಂದು ಆಕೆಯ ಮೊಬೈಲ್​ ತೆಗೆದೆ. ಆದರೆ ಆಕಸ್ಮಿಕವಾಗಿ ಮೆಸೇಜಸ್​ ತೆರೆಯಿತು. ಅದರಲ್ಲಿ ಆಕೆ ಹಲವು ವರ್ಷಗಳಿಂದ ನನ್ನ ಅಜ್ಜನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾಯಿತು. ನಿಜ ಹೇಳಬೇಕೆಂದರೆ ನಾನು ಯಾರನ್ನು ನನ್ನ ಮಗ ಎಂದು ಪ್ರೀತಿಸುತ್ತಿದ್ದೇನೋ ಅವನು ಕೂಡ ನನ್ನ ಮಗನಲ್ಲ. ನನ್ನ ಅಜ್ಜನಿಗೇ ಹುಟ್ಟಿರುವ ನನ್ನ ಚಿಕ್ಕಪ್ಪ ಎಂದು ಆತ ಹೇಳಿಕೊಂಡಿದ್ದಾನೆ.

ಆ ವ್ಯಕ್ತಿಯ ನೋವಿಗೆ ನೆಟ್ಟಿಗರು ಸ್ಪಂದಿಸಿದ್ದಾರೆ. ಸಮಾಧಾನ ಮಾಡಿಕೊಳ್ಳಿ, ಏಕಾಂತವಾಗಿದ್ದು ನೋವನ್ನು ಕಡಿಮೆ ಮಾಡಿಕೊಳ್ಳಿ ಎನ್ನುವಂತಹ ಹಲವು ಪ್ರತಿಕ್ರಿಯೆಗಳು ವಿಡಿಯೋಗೆ ಬಂದಿವೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ