ಪಣಜಿ: ಮಗುವಿನ ಅಪಹರಣ ಪ್ರಕರಣದಲ್ಲಿ ಶಂಕಿತ ಆರೋಪಿ ವಿಶ್ರಾಂತಿ ಗಾವಡೆಗೆ ಬಾಲ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ತನಿಖಾ ಕಾರ್ಯ ಪೂರ್ಣಗೊಳ್ಳುವ ವರೆಗೆ ಮಗುವಿನ ಪಾಲಕರು ವಾಸಿಸುವ ಪರಿಸರಕ್ಕೆ ತೆರಳಬಾರದು ಎಂದು ನ್ಯಾಯಾಲಯವು ಶಂಕಿತ ಆರೋಪಿಗೆ ಷರತ್ತು ವಿಧಿಸಿದೆ.
ಬಾಲ ನ್ಯಾಯಾಲಯದ ನ್ಯಾಯಾಧೀಶ ವಿಜಯಾ ಆಮರೆ ರವರು ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡು, 10,000 ರೂ ಮೌಲ್ಯದ ವಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ.
ಈ ಪ್ರಕರಣದ ಸಾಕ್ಷೀದಾರರಾಗಿರುವ ಮಗುವಿನ ಪಾಲಕರಿಗೆ ಬೆದರಿಕೆ ಅಥವಾ ಆಮಿಷವೊಡ್ಡುವ ಪ್ರಯತ್ನ ನಡೆಸಬಾರದು ಎಂದು ನ್ಯಾಯಾಲಯವು ಎಚ್ಚರಿಕೆ ನೀಡಿದೆ.
ಘಟನೆ ಹಿನ್ನೆಲೆ:
ಓರಿಸ್ಸಾ ಮೂಲದ ಮಹಿಳೆಯೋರ್ವಳು ಕಳೆದ ವಾರ ಒಂದು ತಿಂಗಳ ತನ್ನ ಮಗುವನ್ನು ಗೋವಾ ಮೆಡಿಕಲ್ ಕಾಲೇಜಿಗೆ ಕರೆತಂದು ಪೋಲಿಯೊ ಡೋಸ್ ಹಾಕಿಸಲು ಬಂದಿದ್ದಳು. ಆಗ ಅಪರಿಚಿತ ಮಹಿಳೆಯೋರ್ವಳು (ವಿಶ್ರಾಂತಿ) ಈಕೆಯ ಗೆಳೆತನ ಬೆಳೆಸಿದರು. ತಿನ್ನಲು ಏನಾದರೂ ತರುತ್ತೇನೆ ನನ್ನ ಮಗುವನ್ನು ನೋಡಿಕೊ ಎಂದು ತಾಯಿಯು ಮಗುವನ್ನು ಅಪರಿಚಿತಳ ಕೈಗೆ ಕೊಟ್ಟು ಎದುರಲ್ಲೇ ಇದ್ದ ಅಂಗಡಿಗೆ ತೆರಳಿದಾಗ ವಿಶ್ರಾಂತಿ ಎಂಬ ಮಹಿಳೆ ಮಗುವನ್ನು ಅಪಹರಿಸಿದ್ದಾಳೆ ಎಂಬ ಆರೋಪವಿದೆ.