ಬೆಂಗಳೂರು: ನಮ್ಮದು ಸಿದ್ದಾಂತದಿಂದ ಬಂದ ಪಕ್ಷ. ಇಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ. ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹರನ್ನು ಕರೆದು ಸಂಸದರನ್ನಾಗಿ ಮಾಡಿದೆವು. ನಾನೂ ಸಾಮಾನ್ಯ ಕಾರ್ಯಕರ್ತ, ಪ್ರಹ್ಲಾದ್ ಜೋಶಿ, ಈಶ್ವರಪ್ಪನವರು ಸಾಮಾನ್ಯ ಕಾರ್ಯಕರ್ತರೇ. ಅದೇ ರೀತಯಡಿಯೂರಪ್ಪನವರು ಸಾಮಾನ್ಯ ಕಾರ್ಯಕರ್ತರೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಕ್ಷದಲ್ಲಿ ಯಾರೂ ದೊಡ್ಡವರಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾರ್ಟಿ ಗೆ ಜಾತಿ ಇಲ್ಲ, ಸಿದ್ದಾಂತ ಮುಖ್ಯ. ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುವಾಗ ಹೊಡೆತ ತಿಂದವರು ಸಿದ್ದಾಂತ ಒಪ್ಪಿದವರು. ನಾನು ಜಾತಿಯ ಕಾರಣಕ್ಕೆ ಈ ಪಕ್ಷದಲ್ಲಿ ಇಲ್ಲ .ನಮ್ಮ ಪಾರ್ಟಿಯಲ್ಲಿ ಯಡಿಯೂರಪ್ಪ ಒಬ್ಬರೇ ಶಾಸಕರಿದ್ದಿದ್ದು. ಆಗ ನಾನು ಬಾವುಟ ಕಟ್ಟುತ್ತಿದ್ದೆ. ಆಗ ನಮ್ಮ ಅಪ್ಪ ಅಮ್ಮ ದೇವೇಗೌಡರ ಪಕ್ಷ ಸೇರಿಲು ಹೇಳಿದ್ದರು. ಆದರೆ ಈ ಪಕ್ಷದ ಸಿದ್ದಾಂತ ದೇಶಕ್ಕೆ ಹಿತವಾಗಿತ್ತು ಅದಕ್ಕೆ ನಾನು ಬಿಜೆಪಿಗೆ ಬಂದೆ ಎಂದರು.